ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಎಸ್ಟೇಟ್: ಖಾಸಗಿ ಷೇರು ಹೂಡಿಕೆ ಕುಸಿತ

ಲಾಕ್‌ಡೌನ್‌, ಮಂದಗತಿಯ ಆರ್ಥಿಕ ಬೆಳವಣಿಗೆಯ ಪರಿಣಾಮ
Last Updated 11 ಜೂನ್ 2020, 4:15 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್‌ನಿಂದಾಗಿದೇಶದ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಜನವರಿ–ಮೇ ಅವಧಿಯಲ್ಲಿ ಖಾಸಗಿ ಷೇರು (ಪಿಇ) ಹೂಡಿಕೆ ಶೇ 93ರಷ್ಟು ಕುಸಿತ ಕಂಡಿದೆ ಎಂದು ಆಸ್ತಿ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್ ತಿಳಿಸಿದೆ.

ಆರ್ಥಿಕ ಮಂದಗತಿ ಮತ್ತು ಕೋವಿಡ್‌ನಿಂದಾಗಿ2020ರ ಮೇ 31ರವರೆಗೆ ಕೇವಲ 5 ಹೂಡಿಕೆ ಒಪ್ಪಂದಗಳು ಮಾತ್ರವೇ ನಡೆದಿವೆ. ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 93ರಷ್ಟು ಇಳಿಕೆಯಾಗಿದೆ ಎಂದು ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಎನ್ನುವ ವರದಿಯಲ್ಲಿ ತಿಳಿಸಿದೆ.

ಕಚೇರಿ ಸ್ಥಳಾವಕಾಶ ವಲಯದಲ್ಲಿಯೂ ಖಾಸಗಿ ಷೇರು ಹೂಡಿಕೆ ಕುಸಿತ ಕಂಡಿದೆ. ರಿಟೇಲ್‌ ವಿಭಾಗವು ಯಾವುದೇ ಹೂಡಿಕೆಯನ್ನು ಆಕರ್ಷಿಸಿಲ್ಲ.

‘ಅನಿಶ್ಚಿತ ಸಂದರ್ಭದಲ್ಲಿದ್ದೇವೆ. ಜಾಗತಿಕ ಮಟ್ಟದಲ್ಲಿಯೇ ಅತ್ಯಂತ ಕಠಿಣವಾದ ಲಾಕ್‌ಡೌನ್‌ ಜಾರಿಯಲ್ಲಿದ್ದು, 2020ನೇ ವರ್ಷವು ಭಾರತದ ವಹಿವಾಟುಗಳಿಗೆ ದೊಡ್ಡ ಸವಾಲಾಗಲಿದೆ’ ಎಂದು ನೈಟ್‌ ಫ್ರ್ಯಾಂಕ್‌ನ ಅಧ್ಯಕ್ಷ ಶಿಶಿರ್‌ ಬೈಜಲ್‌ ಅಭಿಪ್ರಾಯಪಟ್ಟಿದ್ದಾರೆ.

‘ಕಚೇರಿ ವಲಯದ ನಂತರ ಗೋದಾಮು ವಲಯವು ಅತಿ ವೇಗವಾಗಿ ಚೇತರಿಕೆ ಕಂಡುಕೊಳ್ಳಲಿದೆ. ವೇತನ ಕಡಿತ ಮತ್ತು ಉದ್ಯೋಗ ನಷ್ಟದಿಂದಾಗಿ ವಸತಿ ಮತ್ತು ರಿಟೇಲ್‌ ವಿಭಾಗದ ಚೇತರಿಕೆಯು ಬಹಳಷ್ಟು ಕಷ್ಟವಾಗಿರಲಿದೆ’ ಎಂದಿದ್ದಾರೆ.

‘ಒಟ್ಟಾರೆ 2020ರಲ್ಲಿ ದೇಶಿ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಖಾಸಗಿ ಷೇರು ಹೂಡಿಕೆಯು ಮಂದಗತಿಯಲ್ಲಿಯೇ ಇರಲಿದೆ’ ಎಂದೂ ಅವರು ಹೇಳಿದ್ದಾರೆ.

ಹೂಡಿಕೆ ವಿವರ (ಕೋಟಿಗಳಲ್ಲಿ)
ವರ್ಷ: ಒಟ್ಟಾರೆ ಹೂಡಿಕೆ: ಕಚೇರಿ ಸ್ಥಳಾವಕಾಶ
2020ರ ಜನವರಿ–ಮೇ: ₹1,785: ₹1,057
2019ರ ಜನವರಿ–ಮೇ: ₹ 25,350: ₹75,675

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT