ಬುಧವಾರ, ಜನವರಿ 29, 2020
30 °C

ರೆಪೊ ದರ ಯಥಾಸ್ಥಿತಿ, ಜಿಡಿಪಿ ವೃದ್ಧಿ ಅಂದಾಜು ಶೇ 5ಕ್ಕೆ ಇಳಿಕೆ: ಆರ್‌ಬಿಐ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ ಗುರುವಾರ ರೆಪೊ ದರ (ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಪ್ರಕಟಿಸಿದ್ದು, ಹಿಂದಿನ ದರದಲ್ಲಿ ಯಾವುದೇ ಬದಲಾವಣೆ ಘೋಷಿಸದೆ ಶೇ 5.15 ಮುಂದುವರಿಸಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷರಾಗಿರುವ ಹಣಕಾಸು ನೀತಿ ಸಮಿತಿಯು(ಎಂಪಿಸಿ) ದೇಶದ ಆರ್ಥಿಕ ಪರಿಸ್ಥಿತಿಯ ಕುರಿತು ಸಮಾಲೋಚನೆ ನಡೆಸಿ ಆರ್ಥಿಕತೆ ಉತ್ತೇಜನಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ ನೀಡಿದೆ. ಆದರೆ, 2019–20ರ ಜಿಡಿಪಿ ವೃದ್ಧಿ ಅಂದಾಜು ಪರಿಷ್ಕರಿಸಿ ಶೇ 6.1ರಿಂದ ಶೇ 5ಕ್ಕೆ ಇಳಿಸಿದೆ. 

ಇದನ್ನೂ ಓದಿ: ಬಡ್ಡಿ ದರ ಕಡಿತ ಪರಿಹಾರವಲ್ಲ

ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ತನ್ನ ಅಲ್ಪಾವಧಿ ಬಡ್ಡಿ (ರೆಪೊ) ದರಗಳನ್ನು ಕಡಿತಗೊಳಿಸುವ ನಿರೀಕ್ಷೆ ಇತ್ತಾದರೂ, ಆರ್‌ಬಿಐ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದೆ. ರಿವರ್ಸ್‌ ರೆಪೊ ದರ ಶೇ 4.90 ಹಾಗೂ ಬ್ಯಾಂಕ್‌ ದರ ಶೇ 5.40 ಇದೆ. 

ಇದನ್ನೂ ಓದಿ: ಚೇತರಿಸಿಕೊಳ್ಳದ ಆರ್ಥಿಕತೆ

ಹಣದುಬ್ಬರ ದರವು ಅಕ್ಟೋಬರ್‌ನಲ್ಲಿ ನಿರೀಕ್ಷೆಗಿಂತಲೂ ಅಧಿಕ ಮಟ್ಟವನ್ನು ತಲುಪಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ 5.1 ರಿಂದ ಶೇ 4.7 ಹಾಗೂ 2020–21ರ ಜಿಡಿಪಿ ವೃದ್ಧಿ ಶೇ 5.9ರಿಂದ ಶೇ 6.3 ಎಂದು ಇರಲಿದೆ ಎಂದು ನಿರೀಕ್ಷಿಸಲಾಗಿದೆ. 

ಇದನ್ನೂ ಓದಿ: ಆರ್ಥಿಕ ವೃದ್ಧಿ ದರ ಶೇ 5.1: ಕ್ರಿಸಿಲ್‌ ಅಂದಾಜು

ಆರ್ಥಿಕ ವೃದ್ಧಿ ದರವು ದ್ವಿತೀಯ ತ್ರೈಮಾಸಿಕದಲ್ಲಿ 2013ರ ಮಾರ್ಚ್‌ ತಿಂಗಳಿನಿಂದೀಚೆಗೆ ಅತಿ ಕಡಿಮೆ ಮಟ್ಟಕ್ಕೆ (ಶೇ 4.5) ಕುಸಿದಿದೆ. ಹೀಗಾಗಿ ಆರ್ಥಿಕತೆಗೆ ಉತ್ತೇಜನ 

ಸತತ ಐದು ಬಾರಿ ರೆಪೊ ದರ ಕಡಿತಗೊಳಿಸಿದ್ದ ಆರ್‌ಬಿಐ, ಇದುವರೆಗೆ ಶೇ 1.35ರಷ್ಟು ಬಡ್ಡಿ ದರಗಳನ್ನು ತಗ್ಗಿಸಿದೆ. ಆದರೆ, ಬ್ಯಾಂಕ್‌ಗಳು ಬಡ್ಡಿ ಕಡಿತದ ಶೇ 0.29ರಷ್ಟು ಪ್ರಯೋಜನವನ್ನು ಮಾತ್ರ ಗ್ರಾಹಕರಿಗೆ ವರ್ಗಾಯಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು