ಗುರುವಾರ , ಜುಲೈ 7, 2022
23 °C

ಟಾಟಾ ಪರಿಚಯಿಸಲಿದೆ ಸೂಪರ್ ಆ್ಯಪ್ ಟಾಟಾ ನ್ಯೂ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH FILE

ಬೆಂಗಳೂರು: ಎಲ್ಲ ರೀತಿಯ ಪಾವತಿಗೆ ಬಳಕೆಯಾಗುವ ಮತ್ತು ವಿವಿಧ ರೀತಿಯ ಸರಕು ಖರೀದಿಗೆ ಒಂದೇ ಆ್ಯಪ್ ಬಳಕೆಗೆ ಅನುಕೂಲವಾಗುವಂತೆ ಟಾಟಾ ಸಮೂಹ, ಹೊಸ ಟಾಟಾ ನ್ಯೂ ಸೂಪರ್ ಆ್ಯಪ್ ಪರಿಚಯಿಸಲು ಸಜ್ಜಾಗಿದೆ.

ಆರಂಭದಲ್ಲಿ ಪರೀಕ್ಷಾರ್ಥ ಬಳಕೆ ಸಲುವಾಗಿ ಟಾಟಾ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿದ್ದ ಆ್ಯಪ್, ನಂತರದಲ್ಲಿ ಇನ್ವೈಟ್ ಕೋಡ್ ಮೂಲಕ ಇತರರಿಗೂ ದೊರೆಯುತ್ತಿದೆ ಎಂದು ‘ಬ್ಯುಸಿನೆಸ್ ಸ್ಟಾಂಡರ್ಡ್‘ ವರದಿ ಮಾಡಿದೆ.

ರಿವಾರ್ಡ್ಸ್ ಮೂಲಕ, ಬಳಕೆದಾರರು ‘ನ್ಯೂಕಾಯಿನ್ಸ್‘ ಬಳಸಿಕೊಂಡು ಖರೀದಿಗೆ, ರಿಚಾರ್ಜ್ ಕೊಡುಗೆಗಳನ್ನು ಪಡೆಯಬಹುದು ಎಂದು ವರದಿ ಹೇಳಿದೆ.

ಟಾಟಾ ಸಮೂಹದ ವಿವಿಧ ಉದ್ಯಮಗಳಲ್ಲಿ, ಸೇವೆಗಳಲ್ಲಿ ಹೊಸ ಟಾಟಾ ನ್ಯೂ ಸೂಪರ್ ಆ್ಯಪ್ ಬಳಕೆ ಮಾಡುವುದರ ಮೂಲಕ ಗ್ರಾಹಕರು ವಿವಿಧ ಕೊಡುಗೆಗಳ ಪ್ರಯೋಜನ ಪಡೆಯಬಹುದಾಗಿದೆ.

ಮುಂದಿನ ದಿನಗಳಲ್ಲಿ ಹಣಕಾಸು ಪಾವತಿ, ಫೈನಾನ್ಸ್ ಸೇವೆಗಳನ್ನು ಕೂಡ ಟಾಟಾ ನ್ಯೂ ಆ್ಯಪ್ ಮೂಲಕ ಒದಗಿಸಲು ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಪಾವತಿ ನಿಗಮದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು