ಶುಕ್ರವಾರ, ಡಿಸೆಂಬರ್ 6, 2019
20 °C

ರಿಲಯನ್ಸ್‌ ಹಿಂದಿಕ್ಕಿದ ಟಿಸಿಎಸ್‌

Published:
Updated:

ನವದೆಹಲಿ: ಟಾಟಾ ಕನ್ಸಲ್ಟನ್ಸಿ ಸರ್ವೀಸಸ್‌ (ಟಿಸಿಎಸ್‌) ಕಂಪನಿಯು, ಗುರುವಾರದ ಷೇರುಪೇಟೆ ವಹಿವಾಟಿನಲ್ಲಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಮೊದಲ ಸ್ಥಾನಕ್ಕೇರಿದೆ.

ದಿನದ ವಹಿವಾಟಿನ ಅಂತ್ಯದಲ್ಲಿ ಟಿಸಿಎಸ್‌ ಮಾರುಕಟ್ಟೆ ಮೌಲ್ಯ ₹ 7,98,620 ಕೋಟಿಗೆ ತಲುಪಿದೆ. ಇದು, ರಿಲಯನ್ಸ್‌ ಇಂಡಸ್ಟ್ರೀಸ್‌ಗಿಂತಲೂ (ಆರ್‌ಐಎಲ್‌) ₹ 17,456 ಕೋಟಿ ಹೆಚ್ಚಾಗಿದೆ. ಇದರಿಂದ ರಿಲಯನ್ಸ್‌ ಎರಡನೇ ಸ್ಥಾನಕ್ಕೆ ಇಳಿದಿದೆ. ಮಾರುಕಟ್ಟೆ ಮೌಲ್ಯ ₹ 7,81,164 ಕೋಟಿ ಇದೆ.

ಟಿಸಿಎಸ್‌ ಷೇರುಗಳು ಶೇ 1.51ರಷ್ಟು ಏರಿಕೆ ಕಂಡು ಪ್ರತಿ ಷೇರಿನ ಬೆಲೆ ₹ 2,128ಕ್ಕೆ ತಲುಪಿತು.

ರಿಲಯನ್ಸ್‌ ಷೇರುಗಳು ಶೇ 2.11ರಷ್ಟು ಇಳಿಕೆಯಾಗಿ ಪ್ರತಿ ಷೇರಿನ ಬೆಲೆ ₹ 1,232ಕ್ಕೆ ಇಳಿಕೆಯಾಯಿತು.

ಎಚ್‌ಡಿಎಫ್‌ಸಿ ಬ್ಯಾಂಕ್‌, ಎಚ್‌ಡಿಎಫ್‌ಸಿ ಮತ್ತು ಎಚ್‌ಯುಎಲ್‌ ಪ್ರಮುಖ ಐದು ಕಂಪನಿಗಳ ಸಾಲಿನಲ್ಲಿ ಇವೆ.

ಪ್ರತಿ ದಿನದ ವಹಿವಾಟಿನ ಷೇರಿನ ಬೆಲೆಯಲ್ಲಿ ಆಗುವ ಏರಿಳಿತದ ಆಧಾರದ ಮೇಲೆ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿಯೂ ಬದಲಾವಣೆ ಆಗುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು