ಶುಕ್ರವಾರ, ಜನವರಿ 22, 2021
26 °C

ಕರೆ-ಡೇಟಾ ಸೇವೆಗಳ ಬೆಲೆ ಹೆಚ್ಚಳ: ಸುಳಿವು ನೀಡಿದ ವೊಡಾಫೋನ್ ಐಡಿಯಾ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಕರೆ- ಡೇಟಾ ಸೇವೆಗಳ ಬೆಲೆಯನ್ನು ಹೆಚ್ಚಿಸಿದ ಭಾರತದ ಮೂರು ಅತಿದೊಡ್ಡ ಖಾಸಗಿ ಟೆಲಿಕಾಂ ಸಂಸ್ಥೆಗಳ ಪೈಕಿ ವೊಡಾಫೋನ್ ಐಡಿಯಾ ಮೊದಲನೆಯದಾಗಿರಬಹುದು. ಬೆಲೆಗಳನ್ನು ಹೆಚ್ಚಿಸುವುದರಿಂದ ಟೆಲ್ಕೊ ದೂರ ಸರಿಯುವುದಿಲ್ಲ. ಮುಂದಿನ ದಿನಗಳಲ್ಲಿ ಇತರ ಕಂಪನಿಗಳೂ ಈ ಮಾದರಿಯನ್ನು ಅನುಸರಿಸಬಹುದು ಎಂದು ಕಂಪನಿಯ ಸಿಇಒ ರವೀಂದರ್ ಟಕ್ಕರ್ ತಿಳಿಸಿದ್ದಾರೆ.

ನಷ್ಟ ಪರಿಹಾರದ ಭಾಗವಾಗಿ ಟೆಲ್ಕೊದ ಪೋಷಕ ಸಂಸ್ಥೆ ವೊಡಾಫೋನ್ ಗ್ರೂಪ್ ಪಿಎಲ್‌ಸಿ ಕಾನೂನಿಗನುಗುಣವಾಗಿ ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್) ಬಾಕಿ ಪಾವತಿಗೆ ₹ 6,400 ಕೋಟಿ ಪಾವತಿಸುವ ನಿರೀಕ್ಷೆಯಿದೆ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಅಕ್ಷಯ್ ಮೂಂಡ್ರಾ ಹೇಳಿದ್ದಾರೆ.

ಟೆಲಿಕಾಂ ಕ್ಷೇತ್ರದಲ್ಲಿ ಹಾಲಿ ಚಾಲ್ತಿಯಲ್ಲಿರುವ ಬೆಲೆಗಳು ಶಾಶ್ವತವಲ್ಲ. ಉದ್ಯಮವು ಪ್ರತಿ ಬಳಕೆದಾರನಿಂದ ₹ 200ರಿಂದ ₹ 300ರಷ್ಟು ಆದಾಯ ಪಡೆದುಕೊಳ್ಳಬೇಕಿದೆ.

ನೀವು ಪ್ರಸ್ತುತ ಬೆಲೆಗಳನ್ನು ನೋಡಿದರೆ, ಅದರಲ್ಲಿ ಏನಾದರೊಂದು ದೋಷವಿದೆ. ಈ ಮೊದಲೇ ಹೇಳಿದಂತೆ ನಾವು ಬೆಲೆ ಏರಿಕೆಯಿಂದ ದೂರ ಸರಿಯುವುದಿಲ್ಲ ಮತ್ತು ಹಾಗೆ ಬೆಲೆ ಏರಿಕೆ ಮಾಡಿದ ಮೊದಲ ಸಂಸ್ಥೆ ನಾವಾಗುತ್ತೇವೆ ಎನ್ನಲು ಸಂತೋಷಪಡುತ್ತೇವೆ. ಉದ್ಯಮದಲ್ಲಿನ ಇತರರು ಇದನ್ನು ಅನುಸರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

ಕರೆ ಮತ್ತು ಡೇಟಾ ಸೇವೆಗಳಿಗೆ ಪ್ರಸ್ತುತ ಲಭ್ಯವಿರುವ ಬೆಲೆಯಲ್ಲಿ ಉದ್ಯಮವು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಪ್ರತಿಸ್ಪರ್ಧಿ ಭಾರ್ತಿ ಏರ್‌ಟೆಲ್ ಲಿಮಿಟೆಡ್ ಸಿಇಒ ಗೋಪಾಲ್ ವಿಟ್ಟಲ್ ಈ ವಾರದ ಆರಂಭದಲ್ಲಿ ಪುನರುಚ್ಚರಿಸಿದ್ದರು.

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕರೆ ಮತ್ತು ಡೇಟಾ ಸೇವೆಗಳಿಗೆ ಆದ್ಯತೆಯ ಆಧಾರದ ಮೇಲೆ ಬೆಲೆ ನಿಗದಿಪಡಿಸಲು ಚಿಂತಿಸುತ್ತಿದೆ. ಇತ್ತೀಚೆಗೆ ವೊಡಾಫೋನ್, ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಪ್ರತಿನಿಧಿಗಳನ್ನು ಭೇಟಿಯಾಗಿ ಸೇವೆಗಳಿಗೆ ಬೆಲೆ ನಿಗದಿ ಬಗ್ಗೆ ಚರ್ಚಿಸಿದ್ದು, ಇದು ಟೆಲಿಕಾಂ ಉದ್ಯಮದ ಆರೋಗ್ಯವನ್ನು ಸುಧಾರಿಸಬಹುದು ಎಂದು ವೊಡಾಫೋನ್ ಐಡಿಯಾ ಮುಖ್ಯಸ್ಥರು ತಿಳಿಸಿದ್ದಾರೆ.

ಕಂಪನಿಯು 4 ಜಿ ಗ್ರಾಹಕರನ್ನು ಸೆಳೆಯುವತ್ತ ಗಮನ ಹರಿಸುವುದನ್ನು ಮುಂದುವರಿಸುತ್ತದೆ ಮತ್ತು ಹಳೆಯ ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್‌ನ ಹೊಸ ಸಂಯೋಜಿತ ನೆಟ್‌ವರ್ಕ್‌ನಲ್ಲಿ ಬಳಕೆದಾರರ ಅನುಭವವನ್ನು ಸುಧಾರಿಸುವಲ್ಲಿ ಹೂಡಿಕೆ ಮಾಡುತ್ತದೆ. ಸೆಪ್ಟೆಂಬರ್ 30ರ ಹೊತ್ತಿಗೆ ಸುಮಾರು 1.06 ಕೋಟಿ 4 ಜಿ ಬಳಕೆದಾರರನ್ನು ಹೊಂದಿತ್ತು. ಹಿಂದಿನ ತ್ರೈಮಾಸಿಕದಲ್ಲಿ 1.04 ಕೋಟಿ ಬಳಕೆದಾರರಿದ್ದರು ಎಂದು ಟಕ್ಕರ್ ತಿಳಿಸಿದ್ದಾರೆ.

ಟೆಲ್ಕೊ ಈಗ ಗ್ರಾಹಕರ ಮನಸ್ಥಿತಿ ತಮ್ಮೆಡೆಗೆ ಸೆಳೆಯಲು ಮತ್ತು ಹೆಚ್ಚಿನ ಉಳಿತಾಯಕ್ಕಾಗಿ ತನ್ನ ವೆಚ್ಚವನ್ನು ಉತ್ತಮಗೊಳಿಸಲು ತನ್ನ ಕಾರ್ಯತಂತ್ರದ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂದು ಟಕ್ಕರ್ ಹೇಳಿದರು.

ಎಜಿಆರ್‌ನ ಬಾಕಿ ಮೊತ್ತದಲ್ಲಿ ವೊಡಾಫೋನ್ ಐಡಿಯಾ ಈಗಾಗಲೇ ₹ 7,854 ಕೋಟಿ ಪಾವತಿಸಿದೆ, ಆದರೆ ಇನ್ನೂ ₹ 50,000 ಕೋಟಿಗಿಂತ ಹೆಚ್ಚಿನ ಹಣವನ್ನು ದೂರಸಂಪರ್ಕ ಇಲಾಖೆಗೆ ನೀಡಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು