ನವದೆಹಲಿ: ದಿನಸಿ ವಸ್ತುಗಳನ್ನು ಪೂರೈಸುವ ಆನ್‌ಲೈನ್ ವೇದಿಕೆ ‘ಜೆಪ್ಟೊ’ ₹1,653 ಕೋಟಿ ಬಂಡವಾಳ ಸಂಗ್ರಹ ಮಾಡಿರುವುದಾಗಿ ಶುಕ್ರವಾರ ತಿಳಿಸಿದೆ.
ಒಂದು ವರ್ಷದ ಈಚೆಗೆ ಯೂನಿಕಾರ್ನ್ ಆದ (₹ 7,981 ಕೋಟಿಗಿಂತ ಹೆಚ್ಚಿನ ಮೌಲ್ಯದ ಕಂಪನಿ) ದೇಶದ ಮೊದಲ ನವೋದ್ಯಮ ಆಗಿ ಕಂಪನಿ ಹೊರಹೊಮ್ಮಿದೆ.
2025ರ ವೇಳೆಗೆ ಐಪಿಒ ಮೂಲಕ ಕಂಪನಿಯು ಷೇರುಪೇಟೆ ಪ್ರವೇಶಿಸಲಿದೆ ಎಂದು ಸ್ಥಾಪಕರಾದ ಆದಿತ್ ಪಲಿಚಾ ಮತ್ತು ಕೈವಲ್ಯ ವೊಹ್ರಾ ತಿಳಿಸಿದ್ದಾರೆ.
ಹಾಲಿ ಹೂಡಿಕೆದಾರ ಕಂಪನಿಗಳಾದ ನೆಕ್ಸಸ್ ವೆಂಚರ್ ಪಾರ್ಟ್ನರ್ಸ್, ಗ್ಲೇಡ್ ಬ್ರೂಕ್ ಕ್ಯಾಪಿಟಲ್ ಅಲ್ಲದೆ ಹೊಸ ಕಂಪನಿಗಳಾದ ಗುಡ್‌ವಾಟರ್ ಕ್ಯಾಪಿಟಲ್, ಸ್ಟೆಪ್‌ಸ್ಟೋನ್ ಸಮೂಹದಿಂದ ಬಂಡವಾಳ ಸಂಗ್ರಹ ಮಾಡಿರುವುದಾಗಿ ಜೆಪ್ಟೊ ಕಂಪನಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.