ಧನತ್ರಯೋದಶಿ ಹತ್ತಿರವಾಗುತ್ತಿದೆ. ಈ ಹೊತ್ತಿನಲ್ಲಿ ಚಿನ್ನ, ಬೆಳ್ಳಿ ಖರೀದಿಸುವುದು ಶುಭಕರ ಎಂಬ ನಂಬಿಕೆ ಇದೆ. ಚಿನ್ನ, ಬೆಳ್ಳಿ ದರ ಏರುತ್ತಿರುವಾಗ ಸಣ್ಣ ಹೂಡಿಕೆದಾರರು ಏನು ಮಾಡಬೇಕು? ಯಾವ ರೂಪದಲ್ಲಿ ಇವುಗಳನ್ನು ಖರೀದಿಸಬೇಕು? ಈ ಕುರಿತ ನೋಟವೊಂದು ಇಲ್ಲಿದೆ
ವೆಚ್ಚದ ಮೇಲೆ ಇರಲಿ ಗಮನ
ಇಟಿಎಫ್‌ಗಳನ್ನು ಆಯ್ಕೆ ಮಾಡುವಾಗ ಹೂಡಿಕೆದಾರರು ಎಕ್ಸ್‌ಪೆನ್ಸ್ ರೇಷ್ಯೊ (ವೆಚ್ಚ) ನಗದೀಕರಣದ ಅನುಕೂಲದ ಬಗ್ಗೆ ಪರಿಶೀಲನೆ ನಡೆಸಬೇಕು. ಇವು ದೀರ್ಘಾವಧಿಯಲ್ಲಿ ಸಿಗುವ ಲಾಭವನ್ನು ನಿರ್ಧರಿಸುತ್ತವೆ ಇಟಿಎಫ್‌ಗಳು ಚಿನ್ನ ಹಾಗೂ ಬೆಳ್ಳಿಯ ಮೌಲ್ಯ ಹೆಚ್ಚಳಕ್ಕೆ ಎಷ್ಟರಮಟ್ಟಿಗೆ ಸರಿಸಮನಾಗಿ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತವೆ ಎಂಬುದನ್ನು ತೀರ್ಮಾನಿಸುತ್ತವೆ. ಜಾಗತಿಕ ಅನಿಶ್ಚಿತತೆಗಳ ಈ ಸಂದರ್ಭದಲ್ಲಿ ಚಿನ್ನ ಹಾಗೂ ಬೆಳ್ಳಿ ತಮ್ಮ ಗಟ್ಟಿತನ ಏನು ಎಂಬುದನ್ನು ತೋರಿಸಿಕೊಟ್ಟಿವೆ. ಆದರೂ ಇವೆರಡರ ಮೌಲ್ಯವು ಈಚಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸಣ್ಣ ಹೂಡಿಕೆದಾರರು ಹಂತ ಹಂತವಾಗಿ ಇವುಗಳಲ್ಲಿ ಹೂಡಿಕೆ ಮಾಡುವುದೊಳಿತು. ಹೂಡಿಕೆಯ ಹಣದಲ್ಲಿ ಒಂದು ಪಾಲನ್ನು ಚಿನ್ನ ಹಾಗೂ ಬೆಳ್ಳಿಯ ಇಟಿಎಫ್‌ಗಾಗಿ ಅಥವಾ ಫಂಡ್ ಆಫ್ ಫಂಡ್‌ಗಳಿಗಾಗಿ ಮೀಸಲಿಡುವುದು ಒಳ್ಳೆಯದು. ಎಷ್ಟು ಪ್ರಮಾಣದಲ್ಲಿ ಹಣವನ್ನು ಇವುಗಳಿಗಾಗಿ ಮೀಸಲಿಡಬೇಕು ಎಂಬುದನ್ನು ತೀರ್ಮಾನಿಸುವ ಮೊದಲು ಹಣಕಾಸು ಸಲಹೆಗಾರರಿಂದ ಮಾರ್ಗದರ್ಶನ ಪಡೆಯುವುದು ಸರಿಯಾದ ಕ್ರಮ.
ಲೇಖಕ ಐಸಿಐಸಿಐ ಪ್ರುಡೆನ್ಶಿಯಲ್ ಎಎಂಸಿ ಕಂಪನಿ ಹೂಡಿಕೆ ಕಾರ್ಯತಂತ್ರದ ಮುಖ್ಯಸ್ಥ