ಮುಂಬೈ: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಷೇರು ಸೋಮವಾರ ಶೇ 12ರಷ್ಟು ಕುಸಿಯುವ ಮೂಲಕ ₹78.05ಕ್ಕೆ ತಲುಪಿತು. ಈ ಮೂಲಕ ಒಎನ್‌ಜಿಸಿ ಷೇರು ಮೌಲ್ಯ 15 ವರ್ಷಗಳ ಕನಿಷ್ಠ ಮಟ್ಟಕ್ಕೆ ತಲುಪಿತು.

ಇಂಧನ ಮಾರುಕಟ್ಟೆ ಬೆಂಬಲಿಸುವ ಪ್ರಕ್ರಿಯೆಯಲ್ಲಿ ಜಾಗತಿಕ ತೈಲ ಉತ್ಪಾದಕ ಮತ್ತು ರಫ್ತು ರಾಷ್ಟ್ರಗಳನ್ನು ಒಳಗೊಂಡ ಸಂಘನೆ ವಿಫಲವಾದ ಬೆನ್ನಲ್ಲೇ ಸೌದಿ ಅರೇಬಿಯಾ ದರ ಸಮರ ಸಾರಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ 30ರಷ್ಟು ಇಳಿಕೆಯಾಗಿದ್ದು, ದೇಶದ ಒಎನ್‌ಜಿಸಿ ಸೇರಿದಂತೆ ತೈಲ ಉತ್ಪಾದನಾ ಕಂಪನಿಗಳ ಷೇರುಗಳು ಇಳಿಮುಖವಾಗಿವೆ.

ಅನಿಲ ದರ ಇಳಿಕೆ ಮತ್ತು ಕಚ್ಚಾ ತೈಲ ಬೆಲೆ ಕಡಿಮೆಯಾಗಿರುವುದು, ಷೇರುಪೇಟೆಯಲ್ಲಿ ಕಳೆದ ಎರಡು ತಿಂಗಳಿಂದ ಉಂಟಾಗಿರುವ ಮಹಾ ಕುಸಿತದ ಪರಿಣಾಮ ಒಎನ್‌ಜಿಸಿ ಷೇರು ಅತಿ ಹೆಚ್ಚು ಇಳಿಕೆ ಕಂಡಿದೆ.

ಇದನ್ನೂ ಓದಿ:ಸೌದಿ ದರ ಸಮರ, ಕಚ್ಚಾ ತೈಲ ಬೆಲೆ ಶೇ 30 ಇಳಿಕೆ: 29 ವರ್ಷಗಳಲ್ಲೇ ಅತಿ ದೊಡ್ಡ ಕುಸಿತ

ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ಮಾರುಕಟ್ಟೆ ಮೌಲ್ಯ 2004ರ ಆಗಸ್ಟ್‌ನಿಂದ ಇದೇ ಮೊದಲ ಬಾರಿಗೆ ₹1 ಟ್ರಿಲಿಯನ್‌ಗಿಂತ (₹1 ಲಕ್ಷ ಕೋಟಿ) ಕಡಿಮೆ ಆಗಿದೆ. ಮುಂಬೈ ಷೇರುಪೇಟೆ ಅಂಕಿ–ಅಂಶಗಳ ಪ್ರಕಾರ, ಬೆಳಿಗ್ಗೆ 10ಕ್ಕೆ ಒಎನ್‌ಜಿಸಿ ಮಾರುಕಟ್ಟೆ ಮೌಲ್ಯ ₹98,818 ಕೋಟಿಗೆ ಇಳಿದಿದೆ.

ಮಾರುಕಟ್ಟೆ ಮೌಲ್ಯದ ಲೆಕ್ಕಾಚಾರದಲ್ಲಿ ಒಎನ್‌ಜಿಸಿ, ಇತರೆ ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಕೋಲ್ ಇಂಡಿಯಾ ಮತ್ತು ಎನ್‌ಟಿಪಿಸಿ ಹಾಗೂ ಖಾಸಗಿ ಕಂಪನಿಗಳಾದ ಟೈಟಾನ್‌ಮ ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್‌ಗಿಂತಲೂ ಕಡಿಮೆಯಾಗಿದೆ.

ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರದ ಮೇಲೆ 6–8 ಡಾಲರ್ ಕಡಿಮೆ ಮಾಡುವ ಮೂಲಕ ಸೌದಿ ಅರೇಬಿಯಾ ದರ ಸಮರ ಸಾರಿದೆ. ಇದು ಕಳೆದ 20 ವರ್ಷಗಳಲ್ಲೇ ಸೌದಿ ಅರೇಬಿಯಾ ಕೈಗೊಂಡಿರುವ ಅತಿ ದೊಡ್ಡ ದರ ಕಡಿತವಾಗಿದೆ.

ಇದನ್ನೂ ಓದಿ:ಕರಗಿತು ಹೂಡಿಕೆದಾರರ ₹5 ಲಕ್ಷ ಕೋಟಿ ಸಂಪತ್ತು: ಬಿಡದ ಕೊರೊನಾ ಆತಂಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.