ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ: ಮತ್ತೆ 50 ಸಾವಿರ ಗಡಿ ದಾಟಿದ ಸೆನ್ಸೆಕ್ಸ್‌

Last Updated 29 ಏಪ್ರಿಲ್ 2021, 4:57 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆ ಗುರುವಾರ ಏರುಗತಿಯಲ್ಲಿ ಸಾಗಿದೆ. ವಹಿವಾಟು ಆರಂಭದಲ್ಲಿಯೇ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 590 ಅಂಶಗಳಷ್ಟು ಏರಿಕೆ ಕಂಡಿದೆ.

ಸೆನ್ಸೆಕ್ಸ್‌ ಮತ್ತೆ 50 ಸಾವಿರ ಅಂಶಗಳ ಗಡಿ ದಾಟಿದ್ದು, ಹೂಡಿಕೆದಾರರಲ್ಲಿ ಷೇರು ಖರೀದಿ ಉತ್ಸಾಹ ಹೆಚ್ಚಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 143.65 ಅಂಶ ಹೆಚ್ಚಳದೊಂದಿಗೆ 15,008.20 ಅಂಶಗಳಲ್ಲಿ ವಹಿವಾಟು ನಡೆದಿದೆ.

ಬಜಾಜ್‌ ಆಟೊ, ಹಿಂದುಸ್ತಾನ್‌ ಯೂನಿಲಿವರ್‌ ಹಾಗೂ ಟೈಟಾನ್‌ ಕಂಪನಿಗಳ ತ್ರೈಮಾಸಿಕ ವರದಿ ಪ್ರಕಟಿಸುತ್ತಿರುವುದರಿಂದ ಈ ಷೇರುಗಳ ಬಗ್ಗೆ ಹೂಡಿಕೆದಾರರು ಗಮನ ಹರಿಸಿದ್ದಾರೆ.

ಇಂಡಸ್‌ಇಂಡ್‌ ಬ್ಯಾಂಕ್‌ ಷೇರು ಶೇ 3ರಷ್ಟು ಹೆಚ್ಚಳವಾಗಿ, ಮತ್ತೆ ಇಳಿಕೆಯಾಗಿದೆ. ಆ್ಯಕ್ಸಿಸ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಬಜಾಜ್‌ ಫಿನ್‌ಸರ್ವ್‌, ಒಎನ್‌ಜಿಸಿ, ಕೊಟಾಕ್‌ ಬ್ಯಾಂಕ್‌ ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳ ಬೆಲೆ ಏರಿಕೆಯಾಗಿದೆ.

ಸೆಸ್ಲೆ ಇಂಡಿಯಾ, ಎಚ್‌ಸಿಎಲ್‌ ಟೆಕ್‌ ಷೇರು ಬೆಲೆ ಇಳಿಮುಖವಾಗಿದೆ.

ಬುಧವಾರ ಸೆನ್ಸೆಕ್ಸ್‌ 789.70 ಅಂಶ ಹೆಚ್ಚಳವಾಗಿ 49,733.84 ಅಂಶಗಳು ಹಾಗೂ ನಿಫ್ಟಿ 211.50 ಅಂಶ ಹೆಚ್ಚಳವಾಗಿ 14,864.55 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಗಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹766.02 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹436.20 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT