ಫೆಬ್ರುವರಿ 11ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಶೇ 1ರಷ್ಟು ಕುಸಿತ ಕಂಡಿವೆ. 58,152 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.83ರಷ್ಟು ಕುಸಿದಿದೆ. 17,374 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.80ರಷ್ಟು ತಗ್ಗಿದೆ. ಆರ್‌ಬಿಐ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಇಟ್ಟಿರುವುದು, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಮಾರಾಟದ ಒತ್ತಡ, ಅಮೆರಿಕದಲ್ಲಿ ಹಣದುಬ್ಬರದ ನಡುವೆ ಬಡ್ಡಿ ದರ ಹೆಚ್ಚಳ ಸೇರಿದಂತೆ ಹಲವು ಬೆಳವಣಿಗೆಗಳಿಗೆ ಕಳೆದ ವಾರ ಸಾಕ್ಷಿಯಾಗಿದೆ.

ವಲಯವಾರು ಪ್ರಗತಿಯಲ್ಲಿ ಬಿಎಸ್ಇ ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕ ಶೇ 3.8ರಷ್ಟು, ರಿಯಲ್ ಎಸ್ಟೇಟ್ ಶೇ 2.7ರಷ್ಟು ಮತ್ತು ಎಫ್‌ಎಂಸಿಜಿ ಶೇ 2.2ರಷ್ಟು ತಗ್ಗಿದೆ. ಲೋಹ ಸೂಚ್ಯಂಕ ಮಾತ್ರ ಶೇ 3.8ರಷ್ಟು ಗಳಿಕೆ ಕಂಡಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 5,641.81 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 3,562.19 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ-ಇಳಿಕೆ:
ನಿಫ್ಟಿಯಲ್ಲಿ ಟಾಟಾ ಸ್ಟೀಲ್ ಶೇ 7ರಷ್ಟು, ಕೋಲ್ ಇಂಡಿಯಾ ಶೇ 4ರಷ್ಟು, ಹಿಂಡಾಲ್ಕೊ ಶೇ 3ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇ 3ರಷ್ಟು ಗಳಿಕೆ ಕಂಡಿವೆ. ಎಚ್‌ಡಿಎಫ್‌ಸಿ ಲೈಫ್ ಶೇ 5ರಷ್ಟು, ಟಾಟಾ ಕನ್ಸೂಮರ್ ಶೇ 4ರಷ್ಟು, ಎಲ್ ಆ್ಯಂಡ್ ಟಿ ಶೇ 4ರಷ್ಟು, ಎಸ್‌ಬಿಐ ಲೈಫ್ ಶೇ 3ರಷ್ಟು ಕುಸಿದಿವೆ.

ಮುನ್ನೋಟ:
ಈ ವಾರ ರೋಸರಿ ಬಯೋಟೆಕ್, ರಾಜೇಶ್ ಎಕ್ಸ್‌ಪೋರ್ಟ್ಸ್, ಕ್ರಿಸಿಲ್, ಕೋಲ್ ಇಂಡಿಯಾ, ಗ್ರಾಫೈಟ್ ಇಂಡಿಯಾ, ರೇಲ್‌ಟೆಲ್, ಐಷರ್ ಮೋಟರ್ಸ್, ಅಂಬುಜಾ ಸಿಮೆಂಟ್, ಡಿಶ್ ಟಿವಿ, ಜೆಟ್ ಏರ್‌ವೇಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಜಾಗತಿಕ ವಿದ್ಯಮಾನಗಳು ಮತ್ತು ದೇಶಿ ಬೆಳವಣಿಗೆಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.