ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ದಾಖಲೆ ವಹಿವಾಟು

ಎಚ್‌ಡಿಎಫ್‌ಸಿ ಬ್ಯಾಂಕ್‌, ಆರ್‌ಐಎಲ್‌, ಐಟಿಸಿ ಷೇರುಗಳ ಗಳಿಕೆ
Last Updated 18 ಡಿಸೆಂಬರ್ 2019, 19:40 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವೂ ದಾಖಲೆ ಮಟ್ಟದ ವಹಿವಾಟು ನಡೆಯಿತು.ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆಗಳ ವಹಿವಾಟು ಬುಧವಾರ ಸರ್ವಕಾಲಿಕ ದಾಖಲೆ ಮಟ್ಟದಲ್ಲಿ ಅಂತ್ಯಗೊಂಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 206 ಅಂಶ ಜಿಗಿತ ಕಂಡು ಹೊಸ ಎತ್ತರವಾದ 41,558 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ಮಧ್ಯಂತರ ವಹಿವಾಟಿನಲ್ಲಿ 41,615 ಅಂಶಗಳ ಗರಿಷ್ಠ ಮಟ್ಟವನ್ನೂ ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 57 ಅಂಶ ಹೆಚ್ಚಾಗಿ 12,221 ಅಂಶಗಳ ಹೊಸ ಎತ್ತರಕ್ಕೆ ಏರಿಕೆಯಾಯಿತು.

ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. (ಆರ್‌ಐಎಲ್‌) ಮತ್ತು ಐಟಿಸಿ ಷೇರುಗಳು ಉತ್ತಮ ಗಳಿಕೆ ಕಂಡುಕೊಂಡಿವೆ.

ಗರಿಷ್ಠ ಗಳಿಕೆ: ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ ಗರಿಷ್ಠ ಗಳಿಕೆ ಕಂಡುಕೊಂಡಿದೆ. ಕಂಪನಿ ಷೇರುಗಳು ಶೇ 3.37ರಷ್ಟು ಹೆಚ್ಚಾಗಿವೆ. ಸನ್ ಫಾರ್ಮಾ ಶೇ 2.53, ಏಷ್ಯನ್‌ ಪೇಂಟ್ಸ್‌ ಶೇ 1.88, ಐಟಿಸಿ ಶೇ 1.66ರಷ್ಟು ಏರಿಕೆ ಕಂಡಿವೆ

ಗರಿಷ್ಠ ನಷ್ಟ: ಟಾಟಾ ಮೋಟರ್ಸ್‌ ಷೇರುಗಳ ಮೌಲ್ಯ ಶೇ 3.05ರಷ್ಟು ಇಳಿಕೆ ಕಂಡಿದೆ. ಸೈರಸ್‌ ಮಿಸ್ತ್ರಿ ಅವರನ್ನು ಟಾಟಾ ಸನ್ಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಮರುನೇಮಕ ಮಾಡುವಂತೆ ಎನ್‌ಸಿಎಲ್‌ಟಿ ಆದೇಶ ನೀಡಿರುವುದರಿಂದ ಷೇರುಗಳ ಬೆಲೆ ಇಳಿದಿದೆ.

ಟಾಟಾ ಸಮೂಹ ಕಂಪನಿಗಳಾದ ಟಾಟಾ ಪವರ್‌, ಟಾಟಾ ಕೆಮಿಕಲ್ಸ್ ಮತ್ತು ಟಾಟಾ ಗ್ಲೋಬಲ್‌ ಬೆವರೇಜಸ್‌ ಷೇರುಗಳು ಶೇ 4.14ರವರೆಗೂ ಇಳಿಕೆ ಕಂಡವು.

ರೂಪಾಯಿ ಮೌಲ್ಯ ಹೆಚ್ಚಳ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಒಂದು ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 70.97ರಂತೆ ವಿನಿಮಯಗೊಂಡಿತು.

ಹೂಡಿಕೆ ಮಾಹಿತಿ

₹ 1,248 ಕೋಟಿಮಂಗಳವಾರ ವಿದೇಶಿ ಹೂಡಿಕೆದಾರರು ಖರೀದಿಸಿರುವ ಷೇರುಗಳ ಮೌಲ್ಯ

₹ 796 ಕೋಟಿಮಂಗಳವಾರ ದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡಿರುವ ಷೇರುಗಳ ಮೌಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT