ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಗೆ ಮನೆಯನ್ನು ಹೀಗೆ ಅಲಂಕರಿಸಿ

Published 11 ನವೆಂಬರ್ 2023, 1:01 IST
Last Updated 11 ನವೆಂಬರ್ 2023, 1:01 IST
ಅಕ್ಷರ ಗಾತ್ರ

ಈ ದೀಪಾವಳಿಯಲ್ಲಿ ಮನೆಯಲ್ಲಿ ನೀವೆ ಮಾಡಬಹುದಾದ ಅಲಂಕಾರದ ಒಂದಿಷ್ಟು ಮಾಹಿತಿ ಇಲ್ಲಿದೆ. ದೀಪಾಲಂಕಾರಕ್ಕೆ ಇನ್ನಷ್ಟು ಮೆರುಗು ತನ್ನಿ. 

ಬೆಳಕಿನ ಅಲಂಕಾರ:  ದೀಪಗಳನ್ನು ಒಂದೇ ಸಾಲಿನಲ್ಲಿ ಇರಿಸುವ ಸರಳ ಹಾಗೂ ಆಕರ್ಷಕ ಅಲಂಕಾರ. ತೇಲುವ ದೀಪ, ದೀಪದ ಸೆಂಟರ್‌ಪೀಸ್‌ಗಳು, ರಂಗೋಲಿ ಜೊತೆಗೆ ದೀಪಗಳು, ತೂಗುವ ದೀಪ, ದೀಪ ಮೊಬೈಲ್‌ಗಳು ಇತ್ಯಾದಿ.

ರಂಗೋಲಿಯ ಮರು ವ್ಯಾಖ್ಯಾನ: ನೀವೇ ಮಾಡಬಹುದಾದ ದೀಪಾವಳಿ ಹೊರಾಂಗಣ ಅಲಂಕಾರ. ಸಾಂಪ್ರದಾಯಿಕ ವಿನ್ಯಾಸದ ರಂಗೋಲಿಯ ಬದಲು ಜ್ಯಾಮಿತಿಯ ಮಾದರಿ ಅಥವಾ ಹೂವುಗಳನ್ನು ಬಳಸಿ ಆಕರ್ಷಕ ಬಣ್ಣಗಳ ರಂಗೋಲಿ ರಚಿಸಿ. ಈ ಮೂಲಕ ಅತಿಥಿಗಳನ್ನು ವಿಭಿನ್ನವಾಗಿ ಸ್ವಾಗತಿಸಬಹುದು. ಇದಕ್ಕೆ ಸೃಜನಶೀಲತೆಯ ಸ್ಪರ್ಶ ನೀಡಿ, ವಿನ್ಯಾಸಕ್ಕೆ ವಿಶಿಷ್ಟತೆ ನೀಡಲು ಹೂವಿನ ಎಸಳು ಅಥವಾ ಬಣ್ಣ ಬಳಿದ ಅಕ್ಕಿ ಕಾಳನ್ನು ಬಳಸಬಹುದು.

ದೀಪಗಳಲ್ಲಿ ಮನ ಸೆಳೆಯುವ ಸಂಕೀರ್ಣ ವಿನ್ಯಾಸ (ಅಥವಾ ಚಿತ್ರ) ಬಿಡಿಸುವ ಮೂಲಕ ಅಥವಾ ಆಧುನಿಕವಾಗಿ ಕಾಣುವಂತೆ ಹೊಳಪು ತರುವ ಮೂಲಕ, ದೀಪಾವಳಿ ಅಲಂಕಾರಕ್ಕೆ ಸುಧಾರಣೆ ತರಬಹುದು. ಇದು ದೀಪಾವಳಿಗೆ ಧನಾತ್ಮಕ ಚಿಂತನೆ ತರುವ ಅಲಂಕಾರವಾಗಲಿದೆ.

ಅಂತರಂಗವನ್ನು ಬೆಳಗಿಸಿ: ದೀಪಗಳನ್ನು ಉರಿಸುವ ಮೂಲಕ ಯಾವುದೇ ಸ್ಥಳವನ್ನು ಆಧ್ಯಾತ್ಮಿಕವಾಗಿಸಬಹುದು. ಪೂಜೆಯ ಪೀಠದ ಮೇಲೆ ದೀಪಗಳ ಸಾಲು ಇರಿಸಬಹುದು ಅಥವಾ ಕೋಣೆಯ ಮೂಲೆಗಳಲ್ಲಿ ಇರಿಸಬಹುದು. ಮೂಲೆಯಲ್ಲಿರಿಸಿದ ದೀಪಗಳು ಅಧ್ಯಾತ್ಮ ಮತ್ತು ಪ್ರಶಾಂತತೆಯ ವಾತಾವರಣ ಸೃಷ್ಟಿಸುತ್ತದೆ.

ರಾತ್ರಿಯನ್ನು ಬೆಳಗಿಸಿ: ದೀಪಾವಳಿಗಾಗಿ ಇನ್ನಷ್ಟು ಅಲಂಕಾರಿಕ ವಸ್ತುಗಳು. ಬೆಳಕು ಚದುರಿಸುವ ಆಕರ್ಷಕ ಪರದೆಗಳು ಮತ್ತು ವಿದ್ಯುತ್‌ ದೀಪಗಳ ಗೊಂಚಲುಗಳೊಂದಿಗೆ (chandeliers) ನಿಮ್ಮ ದೀಪಾವಳಿ ಅಲಂಕಾರಕ್ಕೆ ಸೊಬಗು ತರಬಹುದು. ಅಲಂಕಾರಿಕ ವಸ್ತುಗಳನ್ನು ತೂಗುಹಾಕುವುದು ಕೂಡ ಆಕರ್ಷಕ. ಉದಾಹರಣೆಗೆ ಲ್ಯಾಂಟರ್ನ್‌ಗಳು ಅಥವಾ ಸ್ಫಟಿಕದಂತಹ ಆಭರಣಗಳನ್ನು ತೂಗುಹಾಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT