ದಿನ ಭವಿಷ್ಯ | ಬುಧವಾರ, ಜೂನ್ 26, 2019

ಬುಧವಾರ, ಜೂನ್ 26, 2019
28 °C

ದಿನ ಭವಿಷ್ಯ | ಬುಧವಾರ, ಜೂನ್ 26, 2019

ಮೇಷ
ಹಿರಿಯರ ಅನಾರೋಗ್ಯದಿಂದಾಗಿ ವೆಚ್ಚ. ವ್ಯವಹಾರದಲ್ಲಿ ಆದಾಯ ನಿರೀಕ್ಷಿಸಬಹುದು. ಆಧ್ಯಾತ್ಮಿಕ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ. ಅಪರೂಪದ ಅತಿಥಿಗಳ ಆಗಮನ.
ವೃಷಭ
ಆರ್ಥಿಕ ಸಂಪನ್ಮೂಲಗಳು ಕ್ರೂಢೀಕರಣಗೊಂಡು ವ್ಯವಹಾರಗಳು ಉತ್ತಮವಾಗಿ ನಡೆಯಲಿವೆ. ವಿದೇಶ ಪ್ರಯಾಣದ ಭಾಗ್ಯ ಬಂದೊದಗಬಹುದು. ಮಹಿಳೆಯರಿಗೆ ಯಶಸ್ಸು ದೊರಕುವುದು.
ಮಿಥುನ
ವಿದ್ಯಾರ್ಥಿಗಳಿಗೆ ಪ್ರಗತಿ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಸರ್ಕಾರಿ ಸವಲತ್ತುಗಳು ಸಕಾಲದಲ್ಲಿ ಲಭ್ಯ. ಬರಹಗಾರರು, ವಿದ್ವಾಂಸರು, ಕಲಾವಿದರೊಗೆ ಗೌರವ ಪ್ರಾಪ್ತಿ.
ಕಟಕ
ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ. ಆರೋಗ್ಯದಲ್ಲಿ ಸ್ಥಿರತೆಯಿಂದ ಸಂತಸ. ವಿಶೇಷ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಾಧ್ಯತೆ. ಮಕ್ಕಳಿಂದ ನೆಮ್ಮದಿ. ಮನೆಯಲ್ಲಿ ಸಂತಸ.
ಸಿಂಹ
ವೃತ್ತಿಯಲ್ಲಿ ಯಶಸ್ಸು. ಪ್ರೇಮಿಗಳಿಗೆ ಶುಭ ಫಲ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ ಸಾಧ್ಯತೆ. ಕಾರ್ಯಬಾಹುಳ್ಯದಿಂದ ಆರೋಗ್ಯದಲ್ಲಿ ವ್ಯತ್ಯಯ, ದೇಹಾಲಸ್ಯ.
ಕನ್ಯಾ
ಲವಲವಿಕೆಯ ದಿನ. ಕೆಲಸ ಕಾರ್ಯಗಳಲ್ಲಿ ಚಟುವಟಿಕೆಯಿಂದ ಕೂಡಿರುವಿರಿ. ಆತ್ಮ ವಿಮರ್ಷೆ ಮಾಡಿಕೊಳ್ಳಬೇಕಾದ ದಿನ. ಪ್ರಯಾಣಕ್ಕಾಗಿ ಅಧಿಕ ವೆಚ್ಚ ಭರಿಸಬೇಕಾದೀತು.
ತುಲಾ
ತುಲಾ: ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡವರಿಗೆ ಪ್ರಗತಿ. ದಾಂಪತ್ಯದ ಸಮಸ್ಯೆಗಳು ನಿವಾರಣೆಯಾಗಿ ಸಂತೃಪ್ತಿ. ಆಯುಧಗಳ ಬಗ್ಗೆ ನಿರ್ಲಕ್ಷ ಸಲ್ಲ.
ವೃಶ್ಚಿಕ
ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ. ಸರ್ಕಾರಿ ಉದ್ಯೋಗಿಗಳಿಗೆ ಪ್ರಶಂಸೆ. ಸ್ವಂತ ಉದ್ಯಮದಲ್ಲಿ ಉತ್ತಮ ಲಾಭ ಗಳಿಸುವ ಅವಕಾಶ. ಸ್ನೇಹಿತರಿಗಾಗಿ ನಡೆಸುವ ಕೆಲಸಗಳಲ್ಲಿ ಯಶಸ್ಸು.
ಧನು
ಮನೆ ಕಟ್ಟುವ ಯೋಜನೆಗಳು ರೂಪುಗೊಳ್ಳುವ ಸಾಧ್ಯತೆ. ವಾಹನ ವಿಷಯದಲ್ಲಿ ಜಾಗರೂಕರಾಗಿರುವುದು ಉತ್ತಮ. ದೈನಂದಿನ ವ್ಯವಹಾರಗಳು ಸುಗಮವಾಗುವವು.
ಮಕರ
ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ತೊಂದರೆ. ಮಕ್ಕಳಿಂದ ನೆಮ್ಮದಿ. ಸಕುಟುಂಬ ತೀರ್ಥಕ್ಷೇತ್ರ ದರ್ಶನ ಸಾಧ್ಯತೆ. ಸಂಗಾತಿಯಿಂದ ಉತ್ತಮ ಸಹಕಾರ.
ಕುಂಭ
ಕುಂಭ: ಸಾಲಗಳಿಂದ ಮುಕ್ತಿ. ಅನಾವಶ್ಯಕ ಚಿಂತೆಗಳನ್ನು ದೂರ ಮಾಡಿಕೊಳ್ಳಿ. ಸ್ತ್ರೀಯರಿಗೆ ಇಷ್ಟಾರ್ಥ ಸಿದ್ಧಿಯಿಂದ ನೆಮ್ಮದಿ. ರಾಜಕಾರಣಿಗಳಿಗೆ ಯಶಸ್ಸು. ಸಾಮಾಜಿಕ ಮಾನ್ಯತೆ.
ಮೀನ
ಬ್ಯಾಂಕ್, ಹಣಕಾಸು ಸಂಸ್ಥೆಗಳಿಗೆ ಜಾಮೀನು ನೀಡದಿರುವುದೇ ಒಳ್ಳೆಯದು. ಕಿರುಕುಳದಿಂದಾಗಿ ನಿರುತ್ಸಾಹ. ಸಂಗಾತಿಯಿಂದ ಸಾಂತ್ವನದ ಮಾತುಗಳು ಧೈರ್ಯ ನೀಡುವವು.
ದಿನ ಭವಿಷ್ಯ– ಪ್ರಜಾವಾಣಿ | ಯಾವ ರಾಶಿಗೆ ಇಂದು ಏನೇನು ಫಲಗಳಿವೆ ಎಂಬುದನ್ನು ತಿಳಿಯಿರಿ. PRAJAVANI | Know your daily horoscope