ಬಾಗಲಕೋಟೆ: ಜಿಲ್ಲೆಯ ಬನಹಟ್ಟಿಯಲ್ಲಿಫೆ.3 ರಂದು ಹಟಗಾರ ಸಮಾಜದ (ನೇಕಾರ) ವತಿಯಿಂದ ಸಮಾಜದ ಮೊದಲ ಪೀಠಾಧ್ಯಕ್ಷ ಚಿಕ್ಕರೇವಣಸಿದ್ಧ ಶಿವಶರಣರ ಪೀಠಾರೋಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡ ರಾಜಶೇಖರ ಸೊರಗಾಂವಿ, ‘ಫೆ.1 ರಿಂದಲೇ ಕಾರ್ಯಕ್ರಮಗಳು ಆರಂಭ ವಾಗಲಿದ್ದು, ನೂತನ ಪೀಠಾಧ್ಯಕ್ಷರ ಪುರ ಪ್ರವೇಶ ನಡೆಯ ಲಿದೆ. ಇಂಚಲದ ಶಿವಾನಂದ ಭಾರತಿ ಸ್ವಾಮೀಜಿ, ರಬಕವಿ
ಯ ಗುರುಸಿದ್ಧೇಶ್ವರ ಸ್ವಾಮೀಜಿ, ಬನಹಟ್ಟಿಯ ಶರಣ ಬಸವ ಸ್ವಾಮೀಜಿ, ಆಳಂದದ ಚನ್ನಬಸವ ಪಟ್ಟದೇವರು ಸಾನ್ನಿಧ್ಯ ವಹಿಸಲಿದ್ದಾರೆ. ಪ್ರತಿದಿನ ಸಂಜೆ ಧಾರ್ಮಿಕ ಕಾರ್ಯಕ್ರಮಗಳು, ವಚನ– ಚಿಂತನಾ ಗೋಷ್ಠಿ, ಸಾಧಕರಿಗೆ ಸನ್ಮಾನ ನಡೆಯಲಿವೆ’ ಎಂದರು.

ಫೆ.3 ರಂದು ಬೆಳಿಗ್ಗೆ ದೇವರದಾಸಿ ಮಯ್ಯ ದೇವಸ್ಥಾನದ ಗೋಪುರ ಕಟ್ಟಡ ಪೂಜೆ, ವಿಶ್ರಾಂತಿಧಾಮದ ಶಂಕು ಸ್ಥಾಪನೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಎಸ್.ಆರ್.ಎ. ಮೈದಾನದಲ್ಲಿ ಪೀಠಾ ರೋಹಣ ನಡೆಯಲಿದ್ದು, ಮಹಾಲಿಂಗ ಪುರದ ಸಹಜಾನಂದ ಸ್ವಾಮೀಜಿ, ಕಲಬುರಗಿಯ ಲಕ್ಷ್ಮಿದೇವಿ ಅಮ್ಮ, ನೀರಲಕೇರಿಯ ಘನಲಿಂಗ ಸ್ವಾಮೀಜಿ, ಮುದನೂರ ಈಶ್ವರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.