ಮಂಗಳವಾರ, ಮಾರ್ಚ್ 21, 2023
25 °C

ಸಾವರ್ಕರ್‌ಗೆ ಮುನ್ನ ಸಿದ್ಧಗಂಗಾ ಶ್ರೀ ಪರಿಗಣಿಸಿ: ಎಸ್.ಆರ್.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ‘ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟ ಸಾವರ್ಕರ್‌ಗೆ ಭಾರತ ರತ್ನ ಕೊಡುವ ಮುನ್ನ ಲಕ್ಷಾಂತರ ಮಕ್ಕಳಿಗೆ ಅನ್ನ, ಆಶ್ರಯ ನೀಡಿ ಅವರ ಬದುಕು ರೂಪಿಸಿದ ಸಿದ್ಧಗಂಗಾ ಶ್ರೀಗಳನ್ನು ಆ ಪ್ರಶಸ್ತಿಗೆ ಪರಿಗಣಿಸಲಿ‘ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ಧಗಂಗಾ ಶ್ರೀಗಳ ಮರಣಾನಂತರ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಿ ಎಂದು ರಾಜ್ಯದ ಜನತೆ ಮನವಿ ಮಾಡಿದರೂ ಅದಕ್ಕೆ ಕಿವಿಗೊಡಲಿಲ್ಲ. ಈಗ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿದೆ. ಅದಕ್ಕಾಗಿ ಬಿಜೆಪಿಯವರು ಸಾವರ್ಕರ್‌ಗೆ ಪ್ರಶಸ್ತಿ ನೀಡಲು ಹೊರಟಿದ್ದಾರೆ‘ ಎಂದು ಟೀಕಿಸಿದರು. 

ಇದನ್ನೂ ಓದಿ... ಸಾವರ್ಕರ್ ವಿರುದ್ಧ ಟೀಕೆ: ಸಿದ್ಧರಾಮಯ್ಯ ಪ್ರತಿಫಲ ಅನುಭವಿಸುತ್ತಾರೆ –ಶೆಟ್ಟರ್

‘ಈ ಹಿಂದೆ ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದಾಗ ಕೃಷ್ಣೆಯಿಂದ ನೀರು ಹರಿಸಿ ಎಂದರೆ ಮಹಾರಾಷ್ಟ್ರದವರು ಸುತಾರಾಂ ಒಪ್ಪಿರಲಿಲ್ಲ. ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹಾರಾಷ್ಟ್ರಕ್ಕೆ ಹೋಗಿ ನೀರು ಕೊಡ್ತೀನಿ ಎಂದು ಹೇಳಿಬಂದಿದ್ದಾರೆ.  ಮಹಾರಾಷ್ಟ್ರಕ್ಕೆ ನೀರು ಕೊಡಲು ಈಗ ಹೆಚ್ಚುವರಿ ನೀರು ಎಲ್ಲಿದೆ ಎಂದು ಅವರನ್ನೇ ಕೇಳಬೇಕು. ರಾಜ್ಯದ ಹಿತ ಬಲಿಕೊಟ್ಟು ನೆರೆಯವರಿಗೆ ನೀರು ಕೊಡುವಿರಾ ಎಂದು ಪ್ರಶ್ನಿಸಬೇಕಿದೆ‘ ಎಂದರು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ... ಸಿದ್ಧಗಂಗಾ ಶ್ರೀಗೆ ಭಾರತ ರತ್ನ ಕೊಡಿ: ಸಿದ್ದರಾಮಯ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು