ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ

ಉಸ್ತುವಾರಿ ಸಚಿವ ಪ್ರಭು ಚವಾಣ್‌ ಸೂಚನೆ
Last Updated 16 ಮೇ 2021, 2:58 IST
ಅಕ್ಷರ ಗಾತ್ರ

ಕಮಲನಗರ: ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಸಚಿವ ಪ್ರಭು ಚವಾಣ್ ಅವರು ಕೋವಿಡ್‌ ರೋಗಿಗಳಿಗೆ ಆಮ್ಲಜನಕ, ವೆಂಟಿಲೇಟರ್, ರೆಮ್‍ಡಿಸಿವಿರ್, ವ್ಯಾಕ್ಷಿನ್ ನೀಡುತ್ತಿರುವ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ಇಲ್ಲಿಯವರಗೆ ಕೋವಿಶೀಲ್ಡ್ 2891 ಮತ್ತು ಕೋವ್ಯಾಕ್ಸಿನ್-941 ನೀಡಲಾಗಿದ್ದು, ಇದರಲ್ಲಿ ಮೊದಲನೇ ಡೋಸ್-777 ಮತ್ತು ಎರಡನೇ ಡೋಸ್-773 ನೀಡಲಾಗಿದೆ’ ಎಂದು ವೈದ್ಯರು ಮಾಹಿತಿ ನೀಡಿದರು. ಆಸ್ಪತ್ರೆಗೆ ತಜ್ಞ ವೈದ್ಯರ ಅಗತ್ಯ ಇದೆ ಎಂದು ಸಚಿವರ ಗಮನ ಸೆಳೆದರು.

ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್, ಉಪವಿಭಾಗಾಧಿಕಾರಿ ಗರೀಮಾ ಪನ್ವಾರ್, ಡಿಎಚ್‍ಒ ಡಾ.ವಿ.ಜಿ.ರೆಡ್ಡಿ, ಟಿಎಚ್‌ಒ ಡಾ. ಶರಣಯ್ಯ ಮಠಪತಿ, ತಹಶೀಲ್ದಾರ್ ರಮೇಶ ಪೆದ್ದೇ, ಔರಾದ್ ಸಿಇಒ ಮಾಣಿಕರಾವ ಪಾಟೀಲ, ಸಹಾಯಕ ನಿರ್ದೇಶಕ ಶಿವಾನಂದ ಔರಾದೆ, ಆಡಳಿತ ವೈದ್ಯಾಧಿಕಾರಿ ಡಾ.ಶರಣಯ್ಯ ಸ್ವಾಮಿ, ತಾ.ಪಂ ಅಧ್ಯಕ್ಷ ಗಿರೀಶ ಒಡೆಯರ್, ಗ್ರಾ.ಪಂ ಅಧ್ಯಕ್ಷ ಶಿವರಾಜ ಜುಲ್ಫೆ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸದಸ್ಯ ಕಿರಣ ಪಾಟೀಲ ಹಕ್ಯಾಳಕರ್, ಆರೋಗ್ಯ ಸಮಿತಿ ಅಧ್ಯಕ್ಷ ಸುಭಾಷ ಮಿರ್ಚೆ, ಮುಖಂಡ ಶಿವಾನಂದ ವಡ್ಡೆ, ಬಾಲಾಜಿ ತೆಲಂಗ್, ಶ್ರೀರಂಗ ಪರಿಹಾರ, ನಾಗೇಶ ಪತ್ರೆ, ತಾ.ಪಂ ಸದಸ್ಯ ಸಚಿನ್‌ ರಾಠೋಡ್, ಬಸವರಾಜ ಪಾಟೀಲ, ಮಾಧವರಾವ ಚಾಂಗುಣೆ, ರವಿ ಮದನೂರು, ಪ್ರಶಾಂತ ಜಾಧವ, ಜೈಪಾಲ ರಾಠೋಡ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT