ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಮಖಂಡಿ: ಹಿಪ್ಪರಗಿ ಜಲಾಶಯದಿಂದ ನೀರು ಬಿಡುಗಡೆ

Published 9 ಜೂನ್ 2024, 16:22 IST
Last Updated 9 ಜೂನ್ 2024, 16:22 IST
ಅಕ್ಷರ ಗಾತ್ರ

ಜಮಖಂಡಿ: ಈ ಭಾಗದ ಜೀವನದಿ ಕೃಷ್ಣೆಯು ಮೈದುಂಬಿಕೊಳ್ಳುತ್ತಿದ್ದು, ಜನ ಜಾನುವಾರಗಳ ಬಾಯಾರಿಕೆ ತಣಿಸಲು ಮಹಾರಾಷ್ಟ್ರದ ರಾಜಾಪೂರ ಜಲಾಶಯದಿಂದ ಹರಿದು ಬಂದಿರುವ ನೀರು ಭಾನುವಾರ ಹಿಪ್ಪರಗಿ ಜಲಾಶಯ ತಲುಪಿದ್ದು, ಜಲಾಶಯದ ಎಲ್ಲ ಗೆಟ್ ತೆಗೆದು ನೀರು ಹರಿಬಿಡಲಾಗಿದೆ.

ಕೃಷ್ಣಾ ನದಿ ಕಳೆದ ಒಂದು ತಿಂಗಳಿಂದ ಬತ್ತಿ ಬರಿದಾಗಿತ್ತು, ಹಿಪ್ಪರಗಿ ಜಲಾಶಯದಿಂದ ನಗರಗಳಿಂದ ಸರಬರಾಜು ಆಗುತ್ತಿರುವ ನೀರು ಸ್ಥಗಿತಗೊಂಡಿತ್ತು. ನದಿಗೆ ನೀರು ಹರಿದು ಬಂದ ಹಿನ್ನಲೆಯಲ್ಲಿ ಮತ್ತೆ ನೀರು ಪೂರೈಕೆ ಪುನಾರಾರಂಭವಾಗಿದೆ. ರೈತರು, ನದಿಯ ಪಕ್ಕದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಒಟ್ಟು 6 ಟಿಎಂಸಿ ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಜಲಾಶಯದಲ್ಲಿ ಡೆಡ್ ಸ್ಟೋರೆಜ್‌ನಲ್ಲಿ 0.8 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT