ಕೆರೂರ: ಬೀಳಗಿ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೈನಕಟ್ಟಿ, ಅನವಾಲ, ಇನಾಂ ಹನಮನೇರಿ ಗ್ರಾಮಗಳಲ್ಲಿ ₹ 3 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಜೆ.ಟಿ. ಪಾಟೀಲ ಬುಧವಾರ ಚಾಲನೆ ನೀಡಿದರು.

₹ 2 ಕೋಟಿ ವೆಚ್ಚದಲ್ಲಿ ಕೈನಕಟ್ಟಿಯಿಂದ ಕಲಾದಗಿ ಗ್ರಾಮದವರೆಗೆ ಸೇರುವ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ, ₹ 40 ಲಕ್ಷ ವೆಚ್ಚದಲ್ಲಿ ಅನವಾಲ ಗ್ರಾಮದಲ್ಲಿ ಜಿಲ್ಲಾ ಮುಖ್ಯ ರಸ್ತೆಯ ಆಯ್ದ ಭಾಗಗಳಲ್ಲಿ ಚರಂಡಿ ನಿರ್ಮಾಣ, ₹ 50 ಲಕ್ಷ ವೆಚ್ಚದಲ್ಲಿ ಅನವಾಲ ಗ್ರಾಮದಲ್ಲಿ ಜಿಲ್ಲಾ ಮುಖ್ಯರಸ್ತೆ ಆಯ್ದ ಭಾಗಗಳಲ್ಲಿ ಅಡ್ಡಮೋರಿ ನಿರ್ಮಾಣ, ಇನಾಂ ಹನಮನೇರಿ ಗ್ರಾಮದಲ್ಲಿ ₹ 14 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಧರ್ಮಣ್ಣ ಭಗವತಿ, ಪ್ರವೀಣ ಚಿಕ್ಕೂರ, ಹನಮಂತಗೌಡ ಪಾಟೀಲ, ಲಕ್ಷ್ಮಣ ತಳವಾರ, ಶಿವಪ್ಪ ಮೇಟಿ, ಭರಮಪ್ಪ ವಾಲಿಕಾರ, ಕಮಲಗೌಡ ಪಾಟೀಲ, ಯಂಕಂಣ್ಣ ವಾಸನದ, ಬಸು ತಳವಾರ, ಲೋಕೋಪಯೋಗಿ ಇಲಾಖೆ ಎಇಇ ಮಂಜುನಾಥ ತೆಗ್ಗಿ, ಜಿಲ್ಲಾ ಪಂಚಾಯಿತಿ ಎಇ ಅಜೀತ ದಳವಾಯಿ, ಗುತ್ತಿದಾರರಾದ ರುದ್ರಗೌಡ ನ್ಯಾಮಗೌಡರ, ಶಿವಾನಂದ ಮಾದರ, ಶಿವನಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.