ಸೋಮವಾರ, ಆಗಸ್ಟ್ 15, 2022
22 °C

ಕಾಡಸಿದ್ಧೇಶ್ವರ ರಥೋತ್ಸವ, ಐದು ಅಡಿ ದೂರದ ವರೆಗೆ ಮಾತ್ರ ಸಾಗಿದ ತೇರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಬಕವಿ ಬನಹಟ್ಟಿ: ಸ್ಥಳೀಯ ಕಾಡಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಬುಧವಾರ ರಥೋತ್ಸವವು ಸರಳವಾಗಿ ನೆರವೇರಿತು.

ಕೋವಿಡ್‌ ಪರಿಣಾಮ ಕೇವಲ ಐದು ಅಡಿ ವರೆಗೆ ಮಾತ್ರ ತೇರನ್ನು ಎಳೆಯಲಾಯಿತು. ಪ್ರತಿವರ್ಷ ಮಂಗಳವಾರ ಪೇಟೆಯ ಪ್ರಮುಖ ಬೀದಿಗಳಲ್ಲಿ ರಥೋತ್ಸವ ಅದ್ಧೂರಿಯಾಗಿ ನಡೆಯಿತ್ತು. ಈ ಬಾರಿ ಅಂಥ ಜನಜಂಗುಳಿ ಕಾಣಲಿಲ್ಲ. ಕೆಲವೇ ಭಕ್ತರು ರಥವನ್ನು ಕೇವಲ ಐದು ಅಡಿ ವರೆಗೆ ಮಾತ್ರ ಎಳೆದ ಸಂಪ್ರದಾಯ ಪಾಲಿಸಿದರು.

ಕಾಡಸಿದ್ಧೇಶ್ವರರ ಬೆಳ್ಳಿಯ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿ ಸಲಾಗಿತ್ತು. 150 ವರ್ಷ ಪುರಾತನ ರಥವನ್ನು ದೀಪಗಳು ಮತ್ತು ಬೃಹತ್‍ ಪ್ರಮಾಣದ ಹೂವಿನ ಮಾಲೆಗಳಿಂದ ಶೃಂಗರಿಸಲಾಗಿತ್ತು.

ಮೊದಲ ಬಾರಿಗೆ ಮದ್ದು ಸುಡದೆ ರಥೋತ್ಸವ ಕಾಡಸಿದ್ಧೇಶ್ವರ ಜಾತ್ರೆಯು ನಡೆಯಿತು.

ಕೈಮಗ್ಗ ಅಭಿವೃದ್ಧಿ ನಿಮಗದ ಅಧ್ಯಕ್ಷ ಸಿದ್ದು ಸವದಿ, ಮಾಜಿ ಸಚಿವೆ ಉಮಾಶ್ರೀ ದೇವರ ದರ್ಶನ ಪಡೆದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು