ಬಾಗಲಕೋಟೆ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಮಂಗಳವಾರ ನಡೆಸಿದ ಮುಷ್ಕರ ಮುಧೋಳ ತಾಲ್ಲೂಕು ಹೊರತುಪಡಿಸಿ ಜಿಲ್ಲೆಯಲ್ಲಿ ಯಶಸ್ವಿಯಾಯಿತು. ಬಸ್ಗಳು ರಸ್ತೆಗೆ ಇಳಿಯದ್ದರಿಂದ ಪ್ರಯಾಣಿಕರು ಪರದಾಡಿದರು.

ಬೆಳಿಗ್ಗೆಯಿಂದಲೇ ಬಸ್ಗಳು ರಸ್ತೆಗೆ ಇಳಿಯಲಿಲ್ಲ. ಶಾಲಾ–ಕಾಲೇಜುಗಳಿಗೆ ತೆರಳು ಬೆಳಿಗ್ಗೆಯೇ ಬಸ್ ನಿಲ್ದಾಣಕ್ಕೆ ಬಂದಿದ್ದ ವಿದ್ಯಾರ್ಥಿಗಳು ಬಸ್ ಇಲ್ಲದೇ ಕಾಲೇಜುಗಳಿಗೆ ತೆರಳು ಸಾಧ್ಯವಾಗಲಿಲ್ಲ. ಕಚೇರಿಗಳಿಗೆ ತೆರಳುತ್ತಿದ್ದ ನೌಕರರ ಸ್ಥಿತಿಯೂ ಭಿನ್ನವಾಗಿರಲಿಲ್ಲ.

ಕೆಲಸ ಸಿಬ್ಬಂದಿ ದ್ವಿಚಕ್ರ ವಾಹನದಲ್ಲಿ ಕರ್ತವ್ಯಕ್ಕೆ ತೆರಳಿದರೆ, ಕೆಲ ಸಿಬ್ಬಂದಿಯು ಕಚೇರಿಗೆ ಹೋಗದಿದ್ದಕ್ಕೆ ಹಿರಿಯ ಅಧಿಕಾರಿಗಳು ಬೈಯ್ಯುತ್ತಾರೆ ಎಂದು ಹಳಹಳಿಸುತ್ತಲೇ ಮನೆಗಳತ್ತ ಹೆಜ್ಜೆ ಹಾಕಿದರು. ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿ ಕಡಿಮೆಯಿತ್ತು.

ಆಸ್ಪತ್ರೆ, ಮದುವೆ, ದೇವಸ್ಥಾನ ಮುಂತಾದ ಕಡೆ ತೆರಳಲು ಬಂದಿದ್ದ ಪ್ರಯಾಣಿಕರು ಬಸ್ಗಳಿಗಾಗಿ ಕೆಲಹೊತ್ತು ಕಾಯುತ್ತಾ ಕುಳಿತಿದ್ದರು. ನಂತರ ಮನೆಗೆ ತೆರಳಿದರು.

ಬಾಗಲಕೋಟೆ, ನವನಗರ ನಿಲ್ದಾಣದಲ್ಲಿ ಬೆರಳಿಕೆಯಷ್ಟು ಟೆಂಪೊ, ಟ್ರ್ಯಾಕ್ಸ್ಗಳನ್ನು ಸಾರಿಗೆ ಇಲಾಖೆ ವ್ಯವಸ್ಥೆ ಮಾಡಿತ್ತು. ಆದರೆ, ಅವರು ಭರ್ತಿಯಾಗುವವರೆಗೂ ಬಿಡದ್ದರಿಂದ ಗಂಟೆಗಟ್ಟಲೇ ಕಾಯುವ ಸ್ಥಿತಿ ಸಾರ್ವಜನಿರದ್ದಾಗಿತ್ತು. ನಗರದಲ್ಲಿ ಸಂಚರಿಸುವ ಪ್ರಯಾಣಿಕರು ಆಟೊಗಳ ಮೊರೆ ಹೋಗಿದ್ದರು.

ಬಾಗಲಕೋಟೆ, ಹುಬ್ಬಳ್ಳಿ, ವಿಜಯಪುರ, ಬೆಳಗಾವಿ ಸಂಪರ್ಕಿಸುವ ಗದ್ದನಕೇರಿ ಕ್ರಾಸ್ನಲ್ಲಿ ಬಹಳಷ್ಟು ಜನರು ಬಸ್ಗಳಿಗಾಗಿ ಕಾಯುತ್ತಾ ಕುಳಿತಿದ್ದರು.

‘ಮಾಹಿತಿ ಇಲ್ಲದ್ದರಿಂದ ಲಿಂಗಸುಗೂರಿಗೆ ಹೋಗಲು ಬೆಳಿಗ್ಗೆ 7ಕ್ಕೆ ಬಂದು ಕುಳಿತಿದ್ದೇನೆ. ಗಂಟೆಯಾಯಿತು ಯಾವುದೇ ಬಸ್ ಬಂದಿಲ್ಲ. ಬರುತ್ತೋ, ಇಲ್ಲವೋ ಎಂಬ ಮಾಹಿತಿ ನೀಡಲೂ ಯಾರು ಇಲ್ಲ’ ಎಂದು ನಂದೀಶ್ ಅಳಲು ತೋಡಿಕೊಂಡರು.

ಖಾಸಗಿ ವಾಹನಗಳಿಗೆ ಮೊರೆ

ರಬಕವಿ ಬನಹಟ್ಟಿ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೆ ಎಸ್ ಆರ್ ಟಿ ಸಿ ನೌಕರರು ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿತು.

ಬೆಳಗ್ಗೆ ವಸತಿಗೆ ಹೋಗಿದ್ದ ಬಸ್ಗಳು ಮರಳಿ ಡಿಪೊ ಸೇರಿದವು. ಬಹಳಷ್ಟು ಜನರಿಗೆ ಬಸ್ ಸಂಚಾರದ ಬಂದ್

ಬಗ್ಗೆ ಮಾಹಿತಿ ಇರದೆ ಇರುವುದರಿಂದ ಬೆಳಗ್ಗೆ ಬಹಳಷ್ಟು ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಿದ್ದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಗ್ರಾಮದಲ್ಲಿ ವಸತಿ ಇರುವ ಬಸ್ ಮೂಲಕ ಶಾಲಾ ಕಾಲೇಜುಗಳಿಗೆ ಆಗಮಿಸಿದ್ದರು. ಆದರೆ ಕಾಲೇಜು ಬಿಟ್ಟ ನಂತರ ತಮ್ಮ ಗ್ರಾಮಗಳಿಗೆ ತೆರಳಲು ಪರದಾಡಿದರು. ಬಹುತೇಕ ವಿದ್ಯಾರ್ಥಿಗಳು ಟಂಟಂ ವಾಹನಗಳ ಮೂಲಕ ತೆರಳಿದರು.

ನೌಕರರು ಮುಷ್ಕರ ಕೈಗೊಂಡಿದ್ದರಿಂದ ಬೆಳ್ಳಂಬೆಳಗ್ಗೆ ಸಿಪಿಐ ಸಂಜೀವ್ ಬಳಗಾರ ಮತ್ತು ಪಿಎಸ್ಐ ಶಾಂತಾ ಹಳ್ಳಿ ಹಾಗೂ ಐವತ್ತಕ್ಕೂ ಹೆಚ್ಚು ಪೊಲೀಸರು ಮತ್ತು ಬಸ್ ನಿಲ್ದಾಣದಲ್ಲಿ ಬೀಡು ಬಿಟ್ಟಿದ್ದರು. ಆದರೆ ಸಂಜೆಯಾಗುತ್ತಿದ್ದಂತೆ ಬಸ್ಗಳ ಓಡಾಟ ಆರಂಭಗೊಂಡಿತು. ಇದರಿಂದ ಶಾಲಾ ವಿದ್ಯಾರ್ಥಿಗಳು ಯಾವುದೇ ತೊಂದರೆ ಇಲ್ಲದೆ ಗ್ರಾಮಗಳಿಗೆ ತೆರಳುವಂತಾಯಿತು.

ಸ್ಥಳೀಯ ಬಸ್ ನಿಲ್ದಾಣದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಪೊಲೀಸ್ ವಾಹನ ಬೀಡು ಬಿಟ್ಟಿತ್ತು. ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆಯಿಂದ ಬನಹಟ್ಟಿ, ರಬಕವಿ, ತೇರದಾಳ ಹಾಗೂ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಯಥಾಸ್ಥಿತಿ ಸಂಚಾರ

ಮುಧೋಳ: ಸಾರಿಗೆ ನೌಕರರ ಮುಷ್ಕರ ತಾಲ್ಲೂಕಿನ ಜನತೆಗೆ ಅಷ್ಟೊಂದು ಬಿಸಿ ತಟ್ಟಲಿಲ್ಲ. ಶೇ 80 ರಷ್ಟು ಬಸ್ ಸಂಚರಿಸಿದರು.

ಇಲ್ಲಿನ ಬಸ್ ಡಿಪೋದಲ್ಲಿ ಚಾಲಕ ಹಾಗೂ ನಿರ್ವಾಹಕ ಸಿಬ್ಬಂದಿ ಸೇರಿ ಒಟ್ಟು 263 ಜನರು ಇದ್ದಾರೆ. ಇದರಲ್ಲಿ 193 ಜನರು ಕರ್ತವ್ಯಕ್ಕೆ ಹಾಜರಾಗಿದ್ದು, ಮಂಗಳವಾರ 5 ಜನರು ರಜೆ ಇರುತ್ತಾರೆ. 12 ಜನರು ದೀರ್ಘಕಾಲ ಗೈರು ಇರುತ್ತಾರೆ. ಮಂಗಳವಾರ 22 ಜನರು ಗೈರಾಗಿದ್ದದ್ದರು. 98 ಬಸ್ಗಳಲ್ಲಿ 55 ಬಸ್ ಸಂಚಾರ ಮಾಡುತ್ತಿವೆ ಎಂದು ಘಟಕ ವ್ಯವಸ್ಥಾಪಕರು ಪತ್ರಿಕೆಗೆ ತಿಳಿಸಿದರು.

ಸೀಮಿತ ಬಸ್ ಸಂಚಾರ

ಮಹಾಲಿಂಗಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದು, ಪಟ್ಟಣದ ಬಸ್ ನಿಲ್ದಾಣದಿಂದ ಮುಧೋಳ ಕಡೆಗೆ ಮಾತ್ರ ಬಸ್ ಸಂಚರಿಸಿದವು.

ಬೆಳಿಗ್ಗೆ 9 ಗಂಟೆವರೆಗೆ ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿ, ಗೋಕಾಕ, ಮೀರಜ್, ಧಾರವಾಡ ಮುಂತಾದ ಕಡೆಗೆ ಬಸ್ಗಳು ತೆರಳಿದವು. ನಂತರ ಚಿಕ್ಕೋಡಿ, ಜಮಖಂಡಿ ಹಾಗೂ ಗೋಕಾಕ ಡಿಪೋದ ಯಾವುದೇ ಬಸ್ಗಳು ಬರಲಿಲ್ಲ.

ಆದರೆ, ಮಹಾಲಿಂಗಪುರ-ಮುಧೋಳ ಮಾರ್ಗದಲ್ಲಿ ಮಾತ್ರ ಇಡೀ ದಿನ ಬಸ್ಗಳು ಸಂಚರಿಸಿದವು. ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ದೂರದ ಊರುಗಳಿಗೆ ಪ್ರಯಾಣಿಸುವವರು ಮನೆ ಕಡೆಗೆ ಹಿಂದುರಿಗಿದರೆ, ವಿವಿಧ ಭಾಗದ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋದರು.

ಮುಷ್ಕರದ ಬಗ್ಗೆ ಮೊದಲೇ ತಿಳಿದಿದ್ದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರಲಿಲ್ಲ. ಪ್ರೌಢಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು.

‘ಮಹಾಲಿಂಗಪುರದಿಂದ ಶೇ 35 ರಷ್ಟು ಬಸ್ಗಳು ಸಂಚರಿಸಿವೆ. ಸ್ಥಳೀಯವಾಗಿ ಮುಧೋಳದವರೆಗೆ ಬಸ್ ಸಂಚಾರ ಇದೆ. ಆದರೆ, ಡಿಪೋಗಳಿಂದ ಯಾವುದೇ ಬಸ್ಗಳು ಬರದಿರವುದರಿಂದ ಪ್ರಯಾಣಿಕರಿಗೆ ಸಮಸ್ಯೆ ಆಗಿದೆ’ ಎಂದು ನಿಲ್ದಾಣದ ಸಾರಿಗೆ ನಿಯಂತ್ರಕ ಎಲ್.ವೈ.ಭಜಂತ್ರಿ ಹೇಳಿದರು.

ಬಿಕೋ ಎಂದ ಬಸ್ ನಿಲ್ದಾಣ

ಗುಳೇದಗುಡ್ಡ: 38 ತಿಂಗಳ ಹಿಂಬಾಕಿ ವೇತನ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಪಟ್ಟಣದಲ್ಲಿ ಸಾರಿಗೆ ನೌಕರರ ಮುಷ್ಕರ ಮಂಗಳವಾರ ಬೆಳಿಗ್ಗೆಯಿಂದಲೇ ಆರಂಭವಾಗಿದ್ದರಿಂದ ಯಾವುದೇ ಬಸ್ ಸಂಚಾರ ಇರಲಿಲ್ಲ.

ಇದರಿಂದ ಬೇರೆ ಊರಿಗೆ ತೆರಳಬೇಕಾಗಿದ್ದ ಪ್ರಯಾಣಿಕರು, ವಿದ್ಯಾರ್ಥಿಗಳು, ಇತರ ಸರ್ಕಾರಿ ನೌಕರರಿಗೆ, ಕಾರ್ಮಿಕರಿಗೆ ತೀವ್ರ ತೊಂದರೆಯಾಗಿ ಪರದಾಡಿದರು.

ಬಸ್ ಸಂಚಾರ ಇಲ್ಲದ್ದನ್ನು ಖಚಿತಪಡಿಸಿಕೊಂಡ ನಂತರ ಪ್ರಯಾಣಿಕರು ನಿರಾಸೆಯಿಂದಲೇ ಮರಳಿ ಮನೆಗೆ ಹೋದರು. ಪ್ರಯಾಣಿಕರಿಲ್ಲದ ಬಸ್ ನಿಲ್ದಾಣ ಬೆಳಿಗ್ಗೆಯಿಂದ ಸಾಯಂಕಾಲವವರೆಗೆ ಬಿಕೋ ಎನ್ನುತ್ತಿತ್ತು.

ಯಾವುದೇ ಅಹಿತಕರ ಘಟನೆ ಜರುಗಬಾರದೆಂದು ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಂಜೆ 5 ಗಂಟೆಗೆ ಮುಷ್ಕರ ಹಿಂಪಡೆಯಲಾಗಿದೆ ಎಂದು ಕೇಂದ್ರ ಜಂಟಿ ಕ್ರಿಯಾ ಸಮಿತಿಯಿಂದ ಮಾಹಿತಿ ಹೊರಬಿದ್ದರೂ ಚಾಲಕ, ನಿರ್ವಾಹಕರು ಬಸ್ ನಿಲ್ದಾಣದತ್ತ ಸುಳಿಯಲಿಲ್ಲ. ಸಂಜೆ 5 ಗಂಟೆಯ ನಂತರ ಬಸ್ ಓಡಾಟ ಆರಂಭವಾಗಿದೆ. ಸಂಜೆ ಬೇರೆ ಸ್ಥಳಗಳಿಗೆ ತೆರಳುವ ಎಲ್ಲ ಬಸ್ಗಳನ್ನು ಆರಂಭಿಸಲಾಗಿದೆ ಎಂದು ಬಸ್ ಘಟಕದ ವ್ಯವಸ್ಥಾಪಕಿ ಸಾಯಿರಾಬಾನು ಅತ್ತಾರ ತಿಳಿಸಿದರು.

ಬಸ್ ಸಂಚಾರ ಸಂಪೂರ್ಣ ಸ್ಥಗಿತ

ಹುನಗುಂದ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದಿಂದ ಮಂಗಳವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಬೇರೆ ಊರುಗಳಿಗೆ ಹೋಗುವ ಪ್ರಯಾಣಿಕರು ಹಾಗೂ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಪರದಾಡಿದರು.

ಪಟ್ಟಣದಿಂದ ಇಳಕಲ್ ಮುದ್ದೇಬಿಹಾಳ, ಗುಡೂರು, ಅಮೀನಗಡ, ಕಮತಗಿ ಬಾಗಲಕೋಟೆ ಕಡೆ ಟೆಂಪೋ, ಆಟೋ, ಟ್ರಾಕ್ಸ್, ಕ್ರೂಸರ್, ಟಂಟಂ ಗಳು ಸೇರಿದಂತೆ ಇತರೆ ಖಾಸಗಿ ವಾಹನಗಳು ಸಂಚರಿಸುತ್ತಿರುವ ದೃಶ್ಯ ಕಂಡುಬಂದಿತು.

ಬಾಗಲಕೋಟೆ, ಕೋಡಿಹಾಳ ಗುಡೂರು, ಈ ಮೂರು ಮಾರ್ಗಗಳಿಗೆ ಸಾರಿಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡ ಲಾಗಿದೆ. ‘ಕರ್ತವ್ಯಕ್ಕೆ ಗೈರಾದ ಸಿಬ್ಬಂದಿಯನ್ನು ಮೇಲಾ ಧಿಕಾರಿಗಳ ಸೂಚನೆಯಂತೆ ದೂರವಾಣಿ ಮೂಲಕ ಸಂಪರ್ಕಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗುತ್ತಿದೆ ಎಂದು ಘಟಕ ವ್ಯವಸ್ಥಾಪಕ ಅರವಿಂದ ಭಜಂತ್ರಿ ತಿಳಿಸಿದರು.

ಮುಷ್ಕರವನ್ನು ನೌಕರರು ಹಿಂತೆಗೆದುಕೊಂಡಿದ್ದು, ಬುಧವಾರದಿಂದ ಬಸ್ ಸಂಚಾರ ಎಂದಿನಂತೆ ಇರಲಿದೆ
ನಿತಿನ್ ಹೆಗಡೆ, ವಿಭಾಗೀಯ ನಿಯಂತ್ರಣಾಧಿಕಾರಿ ಎನ್ಡಬ್ಲುಆರ್ಟಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.