ಮಹಾಲಿಂಗಪುರ: ‘ಇಂದಿನ ಶಿಕ್ಷಣ ಪದ್ಧತಿ ಸುಧಾರಿಸಬೇಕಿದೆ. ಒಬ್ಬೊಬ್ಬರಿಗೆ ಒಂದೊಂದು ವಿಷಯದಲ್ಲಿ ಆಸಕ್ತಿ ಇರುತ್ತದೆ. ಅಂತಹ ವಿಷಯವನ್ನಷ್ಟೇ ಓದುವ, ಅದರಲ್ಲಿ ಕೌಶಲ ತೋರಿಸುವ ಅವಕಾಶ ಕಲ್ಪಿಸಿದರೆ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡಲು ಸಾಧ್ಯವಿದೆ’ ಎಂದು ನಟ, ನಿರೂಪಕ ಮಾಸ್ಟರ್ ಆನಂದ ಹೇಳಿದರು.

ಪಟ್ಟಣದ ನವಚೇತನ ಶಿಕ್ಷಣ ಸಂಸ್ಥೆಯ ಜೇಸಿ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಕ್ಕಳು ದೇವರ ಸಮಾನ. ಜೀವನ ಹಾಗೂ ಸಮಾಜವನ್ನು ರೂಪಿಸುವ ಶಕ್ತಿ ಶಾಲೆಗಳಿಗಿದೆ. ದೇವಸ್ಥಾನಕ್ಕೆ ಇಲ್ಲದ ಬೇಧಭಾವ ಶಾಲೆಗಳಿಗೂ ಇರುವುದಿಲ್ಲ. ಹೀಗಾಗಿ, ಶಾಲೆಗಳೇ ದೇವಸ್ಥಾನವಿದ್ದಂತೆ. ವಿದ್ಯಾರ್ಥಿಗಳು ಆಟ, ಪಾಠದಲ್ಲಿ ಸಮಾನವಾಗಿ ಬೆರೆಯಬೇಕು’ ಎಂದರು.

ಸಂಸ್ಥೆ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಶಾಂತಿಲಾಲ ಪಟೇಲ, ನಿರ್ದೇಶಕ ರಮೇಶ ಮುಳವಾಡ, ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ದು ನಕಾತಿ, ಪಿಎಸ್ಐಗಳಾದ ಕಿರಣ ಸತ್ತಿಗೇರಿ, ಮಧು ಎಲ್., ಮುಖ್ಯಶಿಕ್ಷಕ ಎಸ್.ಜಿ.ಕೌಜಲಗಿ, ನಾರನಗೌಡ ಉತ್ತಂಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.