ಬಾದಾಮಿ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಎರಡು ಗಂಟೆಗೂ ಹೆಚ್ಚು ಕಾಲ ರಭಸವಾಗಿ ಮಳೆ ಸುರಿಯಿತು.
ಬೆಳಿಗ್ಗೆ ಸುರಿದ ಜೋರಾದ ಮಳೆಯಿಂದಾಗಿ ಧ್ವಜಾರೋಹಣ ನೆರವೇರಿಸಲು ಶಿಕ್ಷಕರಿಗೆ ಮತ್ತು ಮಕ್ಕಳಿಗೆ ತೊಂದರೆಯಾಯಿತು. ಎಪಿಎಂಸಿ ಆವರಣದಲ್ಲಿ ನಡೆದ ತಾಲ್ಲೂಕು ಆಡಳಿತ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮೈದಾನವೆಲ್ಲ ಕೆಸರುಮಯವಾಗಿತ್ತು.
ಮೆಕ್ಕೆಜೋಳ, ಹೈಬ್ರಿಡ್ ಜೋಳ, ಸಜ್ಜೆ, ಶೇಂಗಾ ಮತ್ತು ತೊಗರಿ ಬೆಳೆಗೆ ಅನುಕೂಲವಾಗಿದೆ. ಆದರೆ ಹೆಸರು ಬೆಳೆ ಬಂದಿದ್ದು ಕಾಯಿ ಬಿಡಿಸಲು ರೈತರಿಗೆ ಅನಾನುಕೂಲವಾಗಿದೆ.