ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ ಮುನ್ನ ಕಂಪ್ಲಿ ಉತ್ಸವ ಆಚರಿಸಲು ಆಗ್ರಹ

Published 10 ಫೆಬ್ರುವರಿ 2024, 15:19 IST
Last Updated 10 ಫೆಬ್ರುವರಿ 2024, 15:19 IST
ಅಕ್ಷರ ಗಾತ್ರ

ಕಂಪ್ಲಿ: ನಗರದಲ್ಲಿ ಬಿಜೆಪಿ ಕಂಪ್ಲಿ ಮಂಡಲ ವತಿಯಿಂದ ಗ್ರಾಮ ಚಲೋ ಅಭಿಯಾನ, ಮನೆ ಮನೆಗೆ ಕರಪತ್ರ ವಿತರಣೆ, ನಾರಿಶಕ್ತಿ ವಂದನಾ ಕಾರ್ಯಕ್ರಮ ನಡೆಯಿತು. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಸಕರ ಜನಸಂಪರ್ಕ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿಯ ಮುಖಂಡ ಅಳ್ಳಳ್ಳಿ ವೀರೇಶ ಮಾತನಾಡಿ, ಬರಪೀಡಿತ ತಾಲ್ಲೂಕು ಘೋಷಣೆಯಾದರೂ ಈವರೆಗೆ ರೈತರ ಖಾತೆಗೆ ಬರ ಪರಿಹಾರದ ಹಣ ಜಮೆ ಆಗಿಲ್ಲ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದರು.

ಲೋಕಸಭೆ ಚುನಾವಣೆಗೂ ಮುನ್ನ ‘ಕಂಪ್ಲಿ ಉತ್ಸವ’ ಆಚರಿಸಬೇಕು. ತುಂಗಭದ್ರಾ ನದಿಗೆ ಹೊಸ ಸೇತುವೆ ನಿರ್ಮಿಸಬೇಕು, ನ್ಯಾಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಗಳ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ನನೆಗುದಿಗೆ ಬಿದ್ದಿರುವ ಆಡಳಿತಸೌಧ ಕಾಮಗಾರಿ ಪೂರ್ಣಗೊಳಿಸಬೇಕು. ರೈತರಿಗೆ ನಿರಂತರ ಏಳು ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಶಾಸಕ ಜೆ.ಎನ್. ಗಣೇಶ್ ಅವರ ಆಪ್ತ ಸಹಾಯಕರಾದ ವಿರುಪಾಕ್ಷಿ, ಧನಂಜಯ ಅವರಿಗೆ ಮನವಿ ಸಲ್ಲಿಸಲಾಯಿತು.

ಇದಕ್ಕೂ ಮುನ್ನ ಮಾರುತಿ ನಗರದಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ರಾಮಮಂದಿರ ಮಂದಿರ ನಿರ್ಮಾಣ, ಬಾಲರಾಮ ಮೂರ್ತಿ ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿ ಬರೆದ ಪತ್ರಗಳನ್ನು ಅಂಚೆಪೆಟ್ಟಿಗೆಗೆ ಹಾಕಲಾಯಿತು.

ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳಾಗಿ ನೇಮಕಗೊಂಡ ಅಳ್ಳಳ್ಳಿ ವೀರೇಶ್, ಯರಂಗಳಿ ತಿಮ್ಮಾರೆಡ್ಡಿ, ಉಡೇದ ಸುರೇಶ, ವೀರೇಶಗೌಡ, ಸುಗುಣ, ಸುಮಾರೆಡ್ಡಿ, ಪುಷ್ಪಾ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಪಿ.ಬ್ರಹ್ಮಯ್ಯ, ಎನ್. ಪುರುಷೋತ್ತಮ, ಬಿ. ಸಿದ್ದಪ್ಪ, ಜಿ.ಸುಧಾಕರ, ಟಿ.ವಿ.ಸುದರ್ಶನ ರೆಡ್ಡಿ, ಎಸ್.ಎಂ.ನಾಗರಾಜ, ಎನ್. ರಾಮಾಂಜನೇಯಲು, ವಿ.ಎಲ್. ಬಾಬು, ರಮೇಶ ಹೂಗಾರ, ಬಿ.ಕೆ. ವಿರೂಪಾಕ್ಷಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT