ಕೂಡ್ಲಿಗಿ: ಪಟ್ಟಣದ ಚಂದ್ರಶೇಖರ್ ಆಜಾದ್ ರಂಗ ಮಂದಿರದಲ್ಲಿ ನಾಗರಿಕ ಹಿತ ರಕ್ಷಣಾ ವೇದಿಕೆಯಿಂದ ಪ್ರತಿಷ್ಠಾಪನೆ ಮಾಡಿದ್ದ 18ನೇ ವರ್ಷದ ಗಣೇಶನನ್ನು ಭಾನುವಾರ ರಾತ್ರಿ ಡಿಜೆ ಇಲ್ಲದೆ ಜಾನಪದ ಕಾಲ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆಯ ಮುಖಾಂತರ ವಿಸರ್ಜನೆ ಮಾಡಲಾಯಿತು.

ಐದು ದಿನಗಳ ಕಾಲ ಪ್ರತಿಷ್ಠಾಪನೆ ಮಾಡಿದ್ದ ಗಣೇಶನಿಗೆ ಸಂಜೆ 7.30ಕ್ಕೆ ಸರಿಯಾಗಿ ವಿಧಿ ವಿಧಾನಗಳ ಮೂಲಕ ಗಣೇಶನಿಗೆ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ದೀಪಲಾಂಕಾರ ಮಾಡಿದ್ದ ಟ್ರ್ಯಾಕ್ಟರಿನಲ್ಲಿ ಕೂಡಿಸಿಕೊಂಡು ಮುಖ್ಯ ರಸ್ತೆಗೆ ಬರಲಾಯಿತು. ಅಲ್ಲಿ ಹರಾಜು ಹಾಕಲಾದ ಹುಂಡಿಯನ್ನು ದರ್ಶನ ಗೌಡ ಮತ್ತು ಗೆಳೆಯರು ₹30 ಸಾವಿರಕ್ಕೆ ಪಡೆದುಕೊಂಡರು.

ನಂತರ ಆರಂಭವಾದ ಮೆರವಣಿಗೆಯಲ್ಲಿ ಚೆಂಡೆ ವಾದನ, ಸಮಾಳ, ಬ್ಯಾಂಡ್ ಸೇರಿದಂತೆ ಕಲಾ ತಂಡಗಳು ಅಗಾಗ ಜಿನುಗುಡುತ್ತಿದ್ದ ಮಳೆಯಲ್ಲಿಯೂ ಮೆರವಣಿಯ ಸೋಬಗನ್ನು ಹೆಚ್ಚಿಸಿದ್ದವು. ಅದರಲ್ಲೂ ಉಡಿಪಿಯ ಚೆಂಡೆ ವಾದನ ನೋಡುಗರನ್ನು ಸೇಳೆಯುವುದರ ಜೊತೆಗೆ ಯುವಕರನ್ನು ಕುಣಿಯುವಂತೆ ಮಾಡಿತ್ತು. ಮದಕರಿ ವೃತ್ತದಿಂದ ಹೊರಟು ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿನ ನಿರ್ಮಿಸಿದ್ದ ನೀರಿನ ಹೊಂಡದಲ್ಲಿ ವಿಸರ್ಜನೆ ಮಾಡಲಾಯಿತು.

ನಾಕರಿಕ ಹಿತಾ ರಕ್ಶಣಾ ವೇದಿಕೆಯ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, ಗೌರವಧ್ಯಕ್ಷ ಸುರೇಶ್ ಎಸ್. ಜನ್ನು, ಎಚ್. ವೀರಭದ್ರಪ್ಪ, ಸಿ.ಬಿ. ಸಿದ್ದೇಶ, ಟಿ.ಜಿ. ಮಲ್ಲಿಕಾರ್ಜುನ ಗೌಡ, ಮಂಜುನಾಥ ಜನ್ನು, ಎಚ್. ರಾಜಶೇಖರ, ಉದಯ ಜನ್ನು, ಸೈಯದ್ ಶುಕೂರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.