ಅನುದಾನ ಕೊರತೆಯಿಂದ ಐಬಿ ನಿರ್ವಹಣೆಯಲ್ಲಿ ಸಮಸ್ಯೆಯಾಗಿರುವುದು ನಿಜ. ಹಣ ಬಿಡುಗಡೆಗೆ ಸರ್ಕಾರಕ್ಕೆ ಪತ್ರ ಬರೆದಿದ್ದು ಬಿಡುಗಡೆಯಾದ ತಕ್ಷಣ ಸೌಲಭ್ಯ ಕಲ್ಪಿಸಲು ಕ್ರಮ ವಹಿಸುತ್ತೇವೆ
ರಾಜಪ್ಪ ಎಇಇ ಪಿಡಬ್ಲ್ಯೂಡಿ
ಹೆಸರಿಗಷ್ಟೇ ಕ್ಯಾಂಟೀನ್
ಪ್ರವಾಸಿ ಮಂದಿರದಲ್ಲಿ ಕ್ಯಾಂಟೀನ್ ನಿರ್ವಹಣೆಯೂ ಸರಿ ಇಲ್ಲ. ಹೊರಗಡೆಯಿಂದ ಬರುವ ಅಧಿಕಾರಿಗಳು ಅತಿಥಿಗಳಿಗೆ ಗುಣಮಟ್ಟದ ಊಟ ಉಪಾಹಾರ ಸಿಗುವುದಿಲ್ಲ. ಸೀಮಿತ ಸಂಖ್ಯೆಯ ಜನರಿಗೆ ಆಹಾರ ತಯಾರಿಸುವುದರಿಂದ ಹೊತ್ತು ಮೀರಿ ಬಂದವರಿಗೆ ಏನೂ ಸಿಗುವುದಿಲ್ಲ. ಕುಳಿತು ಆಹಾರ ಸೇವಿಸಲು ಪೀಠೋಪಕರಣಗಳೂ ಇಲ್ಲ. ಹಲವು ವರ್ಷಗಳಿಂದ ಈ ಅವ್ಯವಸ್ಥೆ ಇದ್ದರೂ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಜನರು ದೂರುತ್ತಿದ್ದಾರೆ.