ಬಳ್ಳಾರಿ: ‘ಬೇಡ ಜಂಗಮ ಎಂಬ ಜಾತಿಯೇ ಅಸ್ತಿತ್ವದಲ್ಲಿಲ್ಲ. ಅದು ನಾಶವಾಗಿ ಹೋಗಿದೆ. ಆ ಹೆಸರಿನಿಂದ ಇಡೀ ಪರಿಶಿಷ್ಟ ಜಾತಿಗೇ ಈಗ ಅನ್ಯಾಯವಾಗುತ್ತಿದೆ. ಆದ್ದರಿಂದ ‘ಬೇಡ ಜಂಗಮ’ ಎಂಬುದನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದಲೇ ತೆಗೆಯಬೇಕು’ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.

ಬಳ್ಳಾರಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಬೇಡ ಜಂಗಮ ಎಂದರೆ ಆಂಧ್ರದ ಅಲೆಮಾರಿಗಳು. ಮಾದಿಗರ ಮನೆಯಲ್ಲಿ ಬೇಡಿಕೊಂಡು ತಿನ್ನುತ್ತಿದ್ದವರು. ಈ ಜಾತಿಯ ಹೆಸರಲ್ಲಿದ್ದ ‘ಬೇಡ’ ಎಂಬ ಪದವನ್ನು ಮತ್ತು ‘ಜಂಗಮ’ ಎಂಬ ಪದವನ್ನು ದುರ್ಬಳಕೆ ಮಾಡಿಕೊಂಡು, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ವೀರಶೈವ, ಲಿಂಗಾಯತರು ಪರಿಶಿಷ್ಟ ಜಾತಿಯೊಳಗೆ ಬರುತ್ತಿದ್ದಾರೆ. ‘ಬೇಡ ಜಂಗಮ’ ಹೆಸರಲ್ಲಿ ಮಾದಿಗರ ತಟ್ಟೆಗೆ ಕನ್ನ ಹಾಕುವುದು ಯಾವ ನ್ಯಾಯ’ ಎಂದು ಅವರು ಪ್ರಶ್ನಿಸಿದರು.

‘ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ 101 ಜಾತಿಗಳಿವೆ. ಉಪಜಾತಿಗಳು ಸೇರಿದರೆ 180 ಆಗುತ್ತದೆ. ಆದರೆ, 80–90 ಜಾತಿಗಳು ಅಸ್ತಿತ್ವದಲ್ಲೇ ಇರಲಿಲ್ಲ. 1931ರ ಮಿಲ್ಲರ್ ಆಯೋಗ ಈ ಜಾತಿಗಳನ್ನು ಪಟ್ಟಿ ಮಾಡಿತ್ತು. ಅದು ಈಗ ಅವಾಸ್ತವವಾಗಿದೆ. ಬೇಡ ಜಂಗಮ ಎಂಬ ಜಾತಿಯೇ ನಾಶವಾಗಿ ಹೋಗಿದೆ. ಬುಡುಗ ಜಂಗಮರು ಮಾತ್ರ ಇದ್ದಾರೆ. ಒಬ್ಬರೋ, ಇಬ್ಬರಿಗಾಗಿ ಇಡೀ ಪರಿಶಿಷ್ಟ ಜಾತಿಗೆ ಕೆಟ್ಟದು ಮಾಡಬೇಕೆ?’ ಎಂದರು.

‘ಇಲ್ಲಿಯವರೆಗೆ ಎಷ್ಟು ಜನ ನಕಲಿ ಪ್ರಮಾಣ ಪತ್ರ ಪಡೆದು ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂಬುದನ್ನು ಪತ್ತೆ ಮಾಡಿ ಎಂದು ಒಳಮೀಸಲಾತಿ ಕುರಿತ ಏಕಸದಸ್ಯ ಆಯೋಗಕ್ಕೆ ಪತ್ರ ಬರೆದಿದ್ದೇನೆ. ಬೇಡ ಜಂಗಮ ಎಂಬ ಪದವನ್ನೇ ಎಸ್ಸಿ ಪಟ್ಟಿಯಿಂದ ತೆಗೆಸುತ್ತೇವೆ. ಆ ಬಳಿಕ ಅಕ್ರಮ ಪ್ರವೇಶಕ್ಕೆ ಮುಚ್ಚಳ ಬೀಳಲಿದೆ. ಸುಳ್ಳು ಪ್ರಮಾಣ ಪತ್ರ ಪಡೆದವರಿಗೆ ಜೈಲು ಗ್ಯಾರಂಟಿ. ಸರ್ಕಾರವೂ ಬದ್ಧತೆ ಪ್ರದರ್ಶಿಸಬೇಕು’ ಎಂದರು.

‘ಒಂದು ಮೇಲ್ವರ್ಗದ ಜಾತಿಯು ಪರಿಶಿಷ್ಟರ ಮೀಸಲಾತಿಯನ್ನು ಅಪಹರಿಸುತ್ತಿದೆ. ಇದನ್ನು ಗಮನಿಸಿ ಕೇಂದ್ರ, ರಾಜ್ಯ ಸರ್ಕಾರಗಳೂ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಪರಿಶಿಷ್ಟ ಜಾತಿಯಲ್ಲಿನ ಎಲ್ಲ ಸಮುದಾಯಗಳೂ ಈ ಬಗ್ಗೆ ದೂರು ನೀಡಲಿದ್ದೇವೆ’ ಎಂದರು.

‘ಒಳಮೀಸಲಾತಿ ಜಾರಿಯಾಗಬೇಕಿದ್ದರೆ, ನಮಗೆ ನ್ಯಾಯ ಸಿಗಬೇಕಿದ್ದರೆ ಪರಿಶಿಷ್ಟರು ಮುಚ್ಚಿಕೊಂಡು ತಮ್ಮ ಮೂಲ ಜಾತಿಗಳನ್ನು ಸರಿಯಾಗಿ ನಮೂದಿಸಬೇಕು. ಸಮೀಕ್ಷೆಯಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು’ ಎಂದೂ ಅವರು ಖಾರವಾಗಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.