ಅಭಿವೃದ್ಧಿ ಮಂಡಳಿ ಏಕೆ ಬೇಕು?
ಕಾಫಿ, ಎಣ್ಣೆ ಬೀಜ, ಏಲಕ್ಕಿ ಸೇರಿದಂತೆ ಕಡಿಮೆ ಪ್ರಮಾಣದಲ್ಲಿ ಬೆಳೆಯುವ ಕೆಲ ಬೆಳೆಗಳಿಗೆ ಅಭಿವೃದ್ದಿ ಮಂಡಳಿಗಳಿವೆ. ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಭಾಗದಲ್ಲಿ ಭತ್ತವನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ವಿಶಾಲವಾದ ಪ್ರದೇಶದಲ್ಲಿ, ಭಾರಿ ಪ್ರಮಾಣದಲ್ಲಿ ಬೆಳೆಯಲಾಗುವ ಭತ್ತಕ್ಕೆ ಸಂಶೋಧನೆ ಕೇಂದ್ರ ಬೇಕು. ಇದರ ಬಗ್ಗೆ ತರಬೇತಿಗಳಾಗಬೇಕು. ಮುಖ್ಯವಾಗಿ ಉಪ ಉತ್ಪನ್ನಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲು ಮಂಡಳಿ ಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.