ಹಗರಿಬೊಮ್ಮನಹಳ್ಳಿ: ಒಳ ಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಹೋರಾಟಗಾರ ಭಾಸ್ಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಬಸವೇಶ್ವರ ವೃತ್ತದ ಬಳಿ ಮಂಗಳವಾರ ಆಗಮಿಸಿದ ಒಳ ಮೀಸಲಾತಿ ಕ್ರಾಂತಿಕಾರಿ ರಥಯಾತ್ರೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿ ಮಾಡುವ ಮುಂಚೆಯೇ ಸರ್ಕಾರಿ ಹುದ್ದೆಗಳಿಗೆ ಬಡ್ತಿ ನೀಡುವುದರಿಂದ ಮಾದಿಗ ಸಮಾಜಕ್ಕೆ ಅನ್ಯಾಯವಾಗುತ್ತಿದೆ ಎಂದರು.

‘ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಲ್ಲ, ಒಳ ಮೀಸಲಾತಿ ಜಾರಿಯಾಗುವವರೆಗೂ ಯಾವುದೇ ಹುದ್ದೆಗಳನ್ನು ಭರ್ತಿ ಮಾಡಬಾರದು, ಒಳ ಮೀಸಲಾತಿ ಸೇರಿದಂತೆ ಸಮುದಾಯಕ್ಕೆ ಆಗುವ ಅನ್ಯಾಯದ ವಿರುದ್ಧ ಜೂನ್ 9ರಂದು ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್. ದೊಡ್ಡಬಸಪ್ಪ, ಹುಲಿಗೇಶ್ ಮಾತನಾಡಿದರು.

ಛಲವಾದಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಕಹಳೆ ಬಸವರಾಜ, ದಲಿತ ಸಂಘರ್ಷ ಸಮಿತಿಯ ಮಾದೂರು ಮಹೇಶ್, ಮೇಘರಾಜ್ ಒಂಟಿ, ವರಲಹಳ್ಳಿ ಶಿವಕುಮಾರ್, ಬೆಣ್ಣೆಕಲ್ಲು ಪ್ರಕಾಶ್, ಬ್ಯಾಲಾಳ್ ಮಂಜುನಾಥ್, ಎಚ್. ಪ್ರಭಾಕರ್, ಕಲ್ಲಹಳ್ಳಿ ನಾಗರಾಜ್, ಅರ್ಜುನ್, ಮರಿಯಪ್ಪ, ನಿಂಗಪ್ಪ, ಒಮೇಶ್, ದುರ್ಗಪ್ಪ, ಎಚ್. ಲೋಕಪ್ಪ, ಎಚ್.ಲಕ್ಷ್ಮಪ್ಪ, ಕೋಟೆಪ್ಪ, ಮಾಲವಿ ಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.