ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಸುಕ್ಷೇತ್ರದಲ್ಲಿ ಭಕ್ತರು ಕುದುರೆಕಾರ ಸೇವೆ ಮೂಲಕ ಹರಕೆ ತೀರಿಸಿದರು
ಭಂಡಾರ ಪ್ರಿಯ ಮೈಲಾರಲಿಂಗ
ಏಳುಕೋಟಿ ಭಕ್ತರ ಆರಾಧ್ಯ ದೈವ ಮೈಲಾರಲಿಂಗಸ್ವಾಮಿ ಭಂಡಾರ ಪ್ರಿಯ. ಹಾಗಾಗಿ ಮೈಲಾರ ಸುಕ್ಷೇತ್ರದಲ್ಲಿ ಭಂಡಾರವೇ ಪ್ರಧಾನವಾಗಿದೆ. ಸ್ವಾಮಿಗೆ ಭಕ್ತರು ಹಣ್ಣು ಕಾಯಿ ಹೂ ಜತೆಗೆ ಭಂಡಾರದ ಅರ್ಚನೆ ನೆರವೇರಿಸಿ ಭಕ್ತಿಭಾವ ಮೆರೆಯುತ್ತಾರೆ. ಈ ನೆಲ ಸ್ಪರ್ಶಿಸುವ ಭಕ್ತರೆಲ್ಲ ಹಣೆಗೆ ಭಂಡಾರ ಧರಿಸಿ ಮನದಲ್ಲಿ ಸ್ವಾಮಿ ನೆನೆಯುತ್ತಾರೆ. ನಾನಾ ಬಗೆಯ ಹರಕೆ : ಹರಕೆ ಹೊತ್ತ ಭಕ್ತರು ದೇವಸ್ಥಾನ ಮುಂಭಾಗದಲ್ಲಿ ಮತ್ತು ಕಾರಣಿಕದ ಸ್ಥಳದಲ್ಲಿ ಸ್ವಾಮಿಯನ್ನು ಮನದಲ್ಲಿ ನೆನೆಯುತ್ತಾ ಚಡಿ ಏಟಿನಿಂದ ತಮ್ಮನ್ನು ತಾವು ಹೊಡೆದುಕೊಂಡು ದೇಹ ದಂಡಿಸಿಕೊಳ್ಳುವ ಮೂಲಕ ಸ್ವಾಮಿಗೆ ಹರಕೆ ತೀರಿಸುತ್ತಾರೆ. ಇಷ್ಟಾರ್ಥಿ ಸಿದ್ದಿಗಾಗಿ ಪ್ರಾರ್ಥಿಸಿ ದೀವಟಿಗೆ ಉರಿಸಿ ಭಕ್ತರು ಹರಕೆ ತೀರಿಸುತ್ತಾರೆ.