ಕಂಪ್ಲಿ: ತಾಲ್ಲೂಕಿನ ತುಂಗಭದ್ರಾ ಬಲದಂಡೆ ಮೇಲ್ಮಟ್ಟ ಮತ್ತು ಕೆಳಮಟ್ಟ ಕಾಲುವೆ ವ್ಯಾಪ್ತಿಯಲ್ಲಿ ಭತ್ತ ನಾಟಿ ಪೂರ್ವ ಸಿದ್ಧತೆ ಶುರುವಾಗಿವೆ.

ಕೊಳವೆಬಾವಿ ಮತ್ತು ಏತ ನೀರಾವರಿ ವ್ಯಾಪ್ತಿಯಲ್ಲಿ ಗದ್ದೆಯ ಒಂದು ಭಾಗದಲ್ಲಿ ಸೋನಾ ಮಸೂರಿ, ಆರ್.ಎನ್.ಆರ್, ನೆಲ್ಲೂರು ಸೋನಾ, ಮತ್ತು 1010(ಐ.ಆರ್-64) ತಳಿಯ ಭತ್ತದ ಸಸಿ ಈಗಾಗಲೇ ಸಿದ್ಧವಾಗಿದೆ. ಗದ್ದೆಯ ಮಣ್ಣಿನ ಫಲವತ್ತತೆಗಾಗಿ ಕೆಲ ರೈತರು ಹಸಿರೆಲೆ ಗೊಬ್ಬರಗಳಾದ ಸೆಣಬು, ಡಯಾಂಚ, ಪಿಳ್ಳೆಪೆಸರು ಬೆಳೆದಿದ್ದಾರೆ. ಇನ್ನು ಕೆಲ ರೈತರು ಗದ್ದೆಗಳನ್ನು ಹದಗೊಳಿಸಿದ್ದಾರೆ.

ನೀರಾವರಿ ಸಲಹಾ ಸಮಿತಿ ಸಭೆ ತೀರ್ಮಾನದಂತೆ ಜುಲೈ 10ರಂದು ತುಂಗಭದ್ರಾ ಎಲ್.ಎಲ್.ಸಿ ಮತ್ತು ಎಚ್.ಎಲ್.ಸಿ ಕಾಲುವೆಗಳಿಗೆ ನೀರು ಬಿಡುಗಡೆಯಾಗಲಿದ್ದು, ಎಲ್ಲ ರೈತರ ಚಿತ್ತ ಕಾಲುವೆ ನೀರು ಪೂರೈಕೆಯತ್ತ ನೆಟ್ಟಿದೆ.

ನಾಟಿಗೆ ಮೊದಲು ಗದ್ದೆಗೆ ಕೊಟ್ಟಿಗೆ ಗೊಬ್ಬರ ಎರೆಹುಳು ಹಸಿರೆಲೆ ಗೊಬ್ಬರ ಸೇರಿಸಬೇಕು. ಅಧಿಕೃತ ಮಾರಾಟಗಾರರ ಬಳಿ ಬಿತ್ತನೆ ಬೀಜ ಕೃಷಿ ಪರಿಕರ ಖರೀದಿಸಿಸಿ ಕಡ್ಡಾಯ ಬಿಲ್ ಪಡೆಯಬೇಕು
ಕೆ. ಸೋಮಶೇಖರ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಕಂಪ್ಲಿ

ಎಲ್.ಎಲ್.ಸಿ ಮತ್ತು ಎಚ್.ಎಲ್.ಸಿ ವಿತರಣಾ ನಾಲೆ ತೂಬು(ದ್ವಾರ)ಗಳ ದುರಸ್ತಿಯಾದರೆ ಕೊನೆ ಅಚ್ಚುಕಟ್ಟು ಭೂಮಿಗಳಿಗೂ ನೀರು ತಲುಪುತ್ತದೆ. ಅಧಿಕಾರಿಗಳು ತ್ವರಿತವಾಗಿ ಗಮನಹರಿಸಬೇಕು
ಬಿ. ಗಂಗಾಧರ ಜಿಲ್ಲಾ ಘಟಕದ ಅಧ್ಯಕ್ಷ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘ

ತಾಲ್ಲೂಕು ಭತ್ತ ನಾಟಿ ಪ್ರದೇಶ

ತುಂಗಭದ್ರಾ ಬಲದಂಡೆ ಕೆಳಮಟ್ಟ ಕಾಲುವೆ ವ್ಯಾಪ್ತಿಯಲ್ಲಿ ಸುಮಾರು 6685 ಹೆಕ್ಟೇರ್ ತುಂಗಭದ್ರಾ ಬಲದಂಡೆ ಮೇಲ್ಮಟ್ಟ ಕಾಲುವೆ ವ್ಯಾಪ್ತಿಯಲ್ಲಿ ಅಂದಾಜು 6174 ಹೆಕ್ಟೇರ್ನಲ್ಲಿ ಭತ್ತ ನಾಟಿ ಮಾಡಲಾಗುತ್ತದೆ. ತಾಲ್ಲೂಕಿನ ರಾಮಸಾಗರ ನಂ.10 ಮುದ್ದಾಪುರ ಕಂಪ್ಲಿ ಕೋಟೆ ಹಳೇ ಮಾಗಾಣಿ ಬೆಳಗೋಡುಹಾಳು ಸಣಾಪುರ ಇಟಗಿ ನಂ.2 ಮುದ್ದಾಪುರ ಸೇರಿದಂತೆ ವಿಜಯನಗರ ಕಾಲುವೆ ತುಂಗಭದ್ರಾ ನದಿ ಪಾತ್ರದ ಇತರೆ ಗ್ರಾಮಗಳಲ್ಲಿ 8870 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಕೊನೆ ಹಂತದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.