ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನದ ಮಾಂಸ ಸಾಗಣೆ: ಪೊಲೀಸರಿಂದ ಹಲ್ಲೆ ವಿಡಿಯೊ ಪರಿಶೀಲನೆ

ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
Published 26 ಸೆಪ್ಟೆಂಬರ್ 2023, 4:03 IST
Last Updated 26 ಸೆಪ್ಟೆಂಬರ್ 2023, 4:03 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:  ದನದ ಮಾಂ‌ಸ ಸಾಗಿಸುತ್ತಿದ್ದ ವಾಹನ ಚಾಲಕರ ಮೇಲೆ ನಗರದಲ್ಲಿ ಭಾನುವಾರ ನಡೆದ ಅಮಾನವೀಯ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ವಿಡಿಯೊಗಳನ್ನು ಪೊಲೀಸರು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ.

ಪ್ರಕರಣದಲ್ಲಿ ಶಾಮೀಲಾದವರನ್ನು ಗುರುತಿಸುವ ಕೆಲಸ ನಡೆಯುತ್ತಿದ್ದು, ಜಾವಿದ್‌ ಎಂಬ ವಾಹನ ಚಾಲಕ ತಲೆಮರೆಸಿಕೊಂಡಿದ್ದಾನೆ.  ಶೀಘ್ರದಲ್ಲಿಯೇ ಎಲ್ಲರನ್ನೂ ಬಂಧಿಸಲಾಗುವುದು. ಬಂಧಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ನಗರ ಠಾಣೆಯ ಪೊಲೀಸ್‌ ಇನ್‌‌ಸ್ಪೆಕ್ಟರ್‌ ಅಮರೇಶ್‌ ಗೌಡ ತಿಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶ್ರೀರಾಮಸೇನೆಯ 16 ಕಾರ್ಯಕರ್ತರು ಹಾಗೂ ದನದ ಮಾಂಸ ಸಾಗಾಟ ಮಾಡುತ್ತಿದ್ದ ಏಳು ವಾಹನ ಚಾಲಕರನ್ನು ಬಂಧಿಸಲಾಗಿದೆ.   

ಶ್ರೀರಾಮ ಸೇನೆಯ ಕಾರ್ಯಕರ್ತರ ವಿರುದ್ಧ ದರೋಡೆ, ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ಹಾಗೆಯೇ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಐದು ವಾಹನಗಳ ಮಾಲೀಕರು,ಚಾಲಕರ ವಿರುದ್ಧ ಕರ್ನಾಟಕ ಗೋ ಹತ್ಯೆ ಪ್ರತಿಬಂಧಕ ಮತ್ತು ಸಾಗಾಟ ಅಧಿನಿಯಮ-2020 ಹಾಗೂ ಐಪಿಸಿ ಕಲಂ 504,506 ಅಡಿ ಪ್ರಕರಣ ದಾಖಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT