ದೇವನಹಳ್ಳಿ: ಮಲೇಷ್ಯಾದ ಕ್ವಾಲಾಲಂಪುರದಿಂದ ಭಾನುವಾರ ರಾತ್ರಿ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದ ತಮಿಳುನಾಡಿನ ಪ್ರಯಾಣಿಕರೊಬ್ಬರ ಸೂಟ್ಕೇಸ್ನಲ್ಲಿ ಆರು ಜೀವಂತ ಕಾಡು ಕೋತಿಗಳು ಪತ್ತೆಯಾಗಿವೆ.

ಮಲೇಷ್ಯಾದಿಂದ ಕಳ್ಳ ಸಾಗಣೆ ಮೂಲಕ ತರಲಾಗಿದ್ದ ಆರು ಜೀವಂತ ಕಾಡು ಕೋತಿಗಳನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ರಕ್ಷಣೆ ಮಾಡಿ, ಒಂದೇ ದಿನದಲ್ಲಿ ಮಲೇಷ್ಯಾಕ್ಕೆ ವಾಪಸ್ ಕಳುಹಿಸಿದ್ದಾರೆ.

ಪ್ರಯಾಣಿಕರ ಲಗೇಜ್ ಬ್ಯಾಗ್ ತಪಾಸಣೆ ವೇಳೆ ಸೂಟ್ಕೇಸ್ವೊಂದರಿಂದ ಪ್ರಾಣಿಗಳ ಅರೆಚಾಟದ ಶಬ್ದ ಕೇಳಿದ ಕಸ್ಟಮ್ಸ್ ಅಧಿಕಾರಿಗಳು ಸೂಟ್ಕೇಸ್ ತೆಗೆಸಿ ಪರಿಶೀಲನೆ ಮಾಡಿದರು. ಚಾಕೋಲೇಟ್ ಹಾಗೂ ಬಟ್ಟೆ ತುಂಬಿದ್ದ ಬ್ಯಾಗ್ನಲ್ಲಿ ಆರು ಕೋತಿಗಳನ್ನು ಬಚ್ಚಿಟ್ಟು ತರಲಾಗಿತ್ತು.

ನಾಲ್ಕು ಯಾಮಂಗ್ ಗಿಬ್ಬನ್ ಜಾತಿಯ ಕೋತಿ ಹಾಗೂ ಎರಡು ಹಂದಿ ಬಾಲದ ಮಕಾಕ್ ಕಾಡು ಕೋತಿಗಳು ಸೂಟ್ಕೇಸ್ನಲ್ಲಿದ್ದವು. ಈ ಕೋತಿಗಳು ಮಲೇಷ್ಯಾ, ಥಾಯ್ಲೆಂಡ್ ಹಾಗೂ ದಕ್ಷಿಣ ಏಷ್ಯಾದ ಕಾಡುಗಳಲ್ಲಿ ಮಾತ್ರ ಕಂಡು ಬರುತ್ತವೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಮಿಳುನಾಡಿನ ಈ ಆರೋಪಿ ಈ ಹಿಂದೆಯೂ ಇಂತಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಕಸ್ಟಮ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.