ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾಬಸ್‌ಪೇಟೆ | ’ಕೈಗಾರಿಕೆಗೆ ಫಲವತ್ತಾದ ಕೃಷಿ ಜಮೀನು ಬೇಡ’

Published 3 ಸೆಪ್ಟೆಂಬರ್ 2024, 15:46 IST
Last Updated 3 ಸೆಪ್ಟೆಂಬರ್ 2024, 15:46 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ರೈತರ ವಿರೋಧವಿಲ್ಲ. ಆದರೆ, ಅದಕ್ಕಾಗಿ ಫಲವತ್ತಾದ ಕೃಷಿ ಜಮೀನುಗಳನ್ನು  ಪಡೆಯುತ್ತಿರುವುದು ಸರಿಯಲ್ಲ’ ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ಗಂಗಾಧರ್ ಕಾಸರಘಟ್ಟ ಅಭಿಪ್ರಾಯಪಟ್ಟರು.

ತ್ಯಾಮಗೊಂಡ್ಲು ಹೋಬಳಿ ಕೊಡಿಗೇಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹತ್ತುಕುಂಟೆ ಪಾಳ್ಯದಲ್ಲಿ ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿದರು.

‘ಕೃಷಿ ಭೂಮಿಗೆ ಬದಲಾಗಿ ರಾಜ್ಯದ ವಿವಿಧ ಭಾಗಗಳಲ್ಲಿರುವ ಸುಮಾರು 22 ಸಾವಿರ ಹೇಕ್ಟೆರ್‌ನಷ್ಟು ಬಂಜರು ಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಬೇಕು’ ಎಂದು ಹೇಳಿದರು.

ರೈತ ಉತ್ಪಾದಕ ಸಂಘದ ಅಧ್ಯಕ್ಷ ಜಿ.ಮಂಜುನಾಥ್ ಮಾತನಾಡಿ, ‘ಈ ಭಾಗದಲ್ಲಿನ ಬಹುತೇಕ ರೈತರು ಸಣ್ಣ ಹಿಡುವಳಿದಾರರು. ಕೃಷಿ ಮತ್ತು ಹೈನುಗಾರಿಕೆಯಿಂದ ಬರುವ ಅಲ್ಪ ಆದಾಯವೇ ಜೀವನೋಪಾಯಕ್ಕೆ ಮಾರ್ಗವಾಗಿದೆ. ಹೀಗಿರುವಾಗ ಸರ್ಕಾರ ಅಂತಹ ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಂಡರೆ ಅವರು ಜೀವನ ಸಾಗಿಸುವುದು ಕಷ್ಟವಾಗುತ್ತದೆ’ ಎಂದರು.

ಮುಖಂಡ ಬಳ್ಳಗೆರೆಯ ಬಿ.ಎಚ್.ರಾಜು ಮಾತನಾಡಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದೇವರಾಜು, ತಾಲೂಕು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಚನ್ನೇಗೌಡ, ರೈತರಾದ ಪುಟ್ಟಣ್ಣ, ಲಕ್ಷ್ಮಣ, ದಾಸೆಗೌಡ, ರಮೇಶ್, ಪುಟ್ಟಲಿಂಗಯ್ಯ, ಕೃಷ್ಣಪ್ಪ, ಮಾಳಯ್ಯ, ಅಂಜಿನಪ್ಪ, ಗೌಡಪ್ಪ, ನಾರಾಯಣ ಗೌಡ, ಪುಟ್ಟರಾಜು ಸೇರಿದಂತೆ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT