ಶೀಘ್ರವೇ ಸಾಗುವಳಿ ಚೀಟಿ ವಿತರಣೆ
ಕೆ. ಸಿ. ರೊಪ್ಪದಲ್ಲಿ ಬಗರ್ ಹುಕುಂನಡಿ ಅರ್ಜಿ ಸಲ್ಲಿಸಿರುವ 35ಕ್ಕೂ ಹೆಚ್ಚು ಮಂದಿಗೆ ಶೀಘ್ರದಲ್ಲೇ ಸಾಗುವಳಿ ಚೀಟಿ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು. ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಅದನ್ನು ನಿಯಂತ್ರಣ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.