ಆನೇಕಲ್: ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ರಾಜ್ಯ ವಿಮಾ ನಿಗಮ ಉಪ ಪ್ರಾದೇಶಿಕ ಕಚೇರಿ ವತಿಯಿಂದ ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿ ಯೋಜನೆ ಸ್ಪ್ರೀ – 2025 ಯೋಜನೆಯ ಬಗ್ಗೆ ಕಾರ್ಮಿಕರು ಮತ್ತು ಬೊಮ್ಮಸಂದ್ರ ಕೈಗಾರಿಕ ಸಂಘದ ಪದಾಧಿಕಾರಿಗಳು ಜಾಥಾ ನಡೆಸಿ ಜಾಗೃತಿ ಮೂಡಿಸಿದರು.

ಕಾರ್ಮಿಕರ ರಾಜ್ಯ ವಿಮಾ ನಿಗರ ಉಪ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕಿ ಕವಿತಾ ಸೆಲ್ವಿ ಮಾತನಾಡಿ, ಕಾರ್ಮಿಕರು ಮತ್ತು ಕಾರ್ಖಾನೆಯಗಳ ಮಾಲೀಕರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಉದ್ಯೋಗದಾತರು ಮತ್ತು ಉದ್ಯೋಗಿಗಳ ನೊಂದಣಿ ಉತ್ತೇಜನ ಯೋಜನೆ ರೂಪಿಸಲಾಗಿದೆ ಎಂದರು.

ಬೊಮ್ಮಸಂದ್ರ ಕೈಗಾರಿಕ ಪ್ರದೇಶ ವ್ಯಾಪ್ತಿಯಲ್ಲಿ ಕಾರ್ಮಿಕರು ಮತ್ತು ಕೈಗಾರಿಕಾ ಮಾಲೀಕರು ಇಎಸ್ಐನಡಿಯಲ್ಲಿ ಮಾಹಿತಿಗಳನ್ನು ದಾಖಲಿಸಬೇಕು. ಜುಲೈ 1ರಿಂದ ಡಿ.31ರವರೆಗೆ ಅಭಿಯಾನ ನಡೆಸಲಾಗಿದ್ದು, ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಯೋಜನೆಯಿಂದಾಗಿ ಸಾಮಾಜಿಕ ಸುರಕ್ಷತೆಯ ಪ್ರಯೋಜನೆ ಪಡೆಯಬಹುದು ಎಂದರು.

ಕಾರ್ಮಿಕರ ರಾಜ್ಯ ವಿಮಾ ನಿಗಮ ಉಪ ಪ್ರಾದೇಶಿಕ ಕಚೇರಿ ಉಪ ನಿರ್ದೇಶಕ ರಾಮಬಾಬು, ಉದ್ಯೋಗದಾತರು ತಮ್ಮಲ್ಲಿ ಕಾರ್ಯನಿರ್ವಹಿಸಲು ಗುತ್ತಿಗೆ ಉದ್ಯೋಗಿಗಳು ಸೇರಿದಂತೆ ಎಲ್ಲಾ ಉದ್ಯೋಗಿಗಳ ಮಾಹಿತಿಯನ್ನು ಯೋಜನೆಯಡಿಯಲ್ಲಿ ನೊಂದಾಯಿಸಬೇಕು. ಕಾರ್ಮಿಕರ ವಿಮಾ ಕಾಯ್ದೆಯಡಿಯಲ್ಲಿ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯಲು ನೊಂದಣಿ ಕಡ್ಡಾಯ. ಸ್ಪ್ರೀ ಯೋಜನೆಯ ಬಗ್ಗೆ ಯಾವುದೇ ಮಾಹಿತಿಗಳು ಅವಶ್ಯಕವಿದ್ದಲ್ಲಿ sro-bommasandra@esic.nic.in ಅಥವಾ ದೂರವಾಣಿ ಸಂಖ್ಯೆ 080-26786391 ಸಂಪರ್ಕಿಸಬಹುದಾಗಿದೆ ಎಂದರು.

ಬೊಮ್ಮಸಂದ್ರ ಕೈಗಾರಿಕಾ ಸಂಘದ ವ್ಯವಸ್ಥಾಪಕ ಶಿವಕುಮಾರ್, ಮುಖಂಡರಾದ ಯತೀಶ್, ಅಶೋಕ್, ಅಭಿಜಿತ್, ಮಹೇಶ್, ಬ್ರಿಜೇಶ್, ರಾಜೇಶ್ವರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.