ದೊಡ್ಡಬಳ್ಳಾಪುರ: ತಾಲ್ಲೂಕಿನ ಗುಂಜೂರು ಗ್ರಾಮದ ಹೊರವಲಯದಲ್ಲಿರುವ ಮುನಿಯಪ್ಪ ಎಂಬುವವರ ತೋಟದ ಮನೆಯಲ್ಲಿ ಸಾಕಿದ್ದ ಒಂದು ಎಮ್ಮೆ ಕರು, ಎರಡು ಹಸುವಿನ ಕರು ಹಾಗೂ ಒಂದು ಹಸು ಸೇರಿ ನಾಲ್ಕು ರಾಸು ಮೃತಪಟ್ಟಿವೆ.

ಮುನಿಯಪ್ಪ ಅವರ ತೋಟದ ಮನೆಯಲ್ಲಿ ಸುಮಾರು 10 ಹಸುಗಳನ್ನು ಸಾಕಲಾಗಿತ್ತು. ಎಂದಿನಂತೆ ಹಸುಗಳ ಮೈ ತೊಳೆದು, ಬೂಸ ನೀರು ಇಟ್ಟು ಶೆಡ್ಡಿನೊಳಗೆ ಕರೆದೊಯ್ಯುವಾಗ ದಿಢೀರನೆ ಕುಸಿದು ಬಿದ್ದು ಮೃತಪಟ್ಟಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಹಸುಗಳ ಸಾವಿಗೆ ಕಾರಣ ತಿಳಿದುಬಂದಿಲ್ಲ. ಕಲುಷಿತ ನೀರು ಸೇವನೆಯಿಂದ ಹಸುಗಳು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ. ಇತರೆ ಹಸುಗಳೂ ನಿತ್ರಾಣವಾಗಿದ್ದು, ಸ್ಥಳಕ್ಕೆ ಪಶು ವೈದ್ಯರಾದ ಡಾ.ನವೀನ್,ಡಾ. ಕುಮಾರಸ್ವಾಮಿ, ಡಾ.ದೀಪಕ್, ಅಕಕ್ಷ ಅರುಣ್ ಭೇಟಿ ನೀಡಿ ಚಿಕಿತ್ಸೆ ನೀಡಿದರು .

ಹಸುಗಳಿದ್ದ ಸ್ಥಳದ ನೀರಿನ ಮಾದರಿ ಸಂಗ್ರಹಿಸಲಾಗಿದೆ. ಘಟನೆ ಬಗ್ಗೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ.ಎನ್.ಜಗದೀಶ್ ಅವರಿಗೆ ಮಾಹಿತಿ ನೀಡಲಾಗಿದೆ. ಅಸ್ವಸ್ಥ ಹಸುಗಳಿಗೆ ಚಿಕಿತ್ಸೆ ನೀಡಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರ ಹಸುಗಳ ಸಾವಿನ ನಿಖರ ಕಾರಣ ತಿಳಿಯಲಿದೆ. ಮೃತಪಟ್ಟಿರುವ ಹಸುಗಳಿಗೆ ಕಾಮಧೇನು ವಿಪತ್ತು ಯೋಜನೆಯಡಿ ಹಾಗೂ ರೈತಾಭಿವೃದ್ದಿ ಯೋಜನೆಯಡಿ ಪ್ರತಿ ಹಸುವಿಗೆ ₹10 ಸಾವಿರ ಪರಿಹಾರ ನೀಡಲಾಗುವುದು ಎಂದು ತಾಲ್ಲೂಕು ಮುಖ್ಯ ಪಶು ವೈದ್ಯಾಕಾರಿ ಡಾ.ವಿಶ್ವನಾಥ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.