ಗಡ್ಡದನಾಯಕನಹಳ್ಳಿ ಡೇರಿಗೆ ಅವಿರೋಧ ಆಯ್ಕೆ

7

ಗಡ್ಡದನಾಯಕನಹಳ್ಳಿ ಡೇರಿಗೆ ಅವಿರೋಧ ಆಯ್ಕೆ

Published:
Updated:
Prajavani

ವಿಜಯಪುರ: ಗಡ್ಡದನಾಯಕನಹಳ್ಳಿ ಡೇರಿಗೆ ಅಧ್ಯಕ್ಷರಾಗಿ ಬಿ.ನಾಗರಾಜ್, ಉಪಾಧ್ಯಕ್ಷರಾಗಿ ಶಶಿಕಲಾ ಸಿ.ಎನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಬಿ.ವಿ.ಶೋಭಾ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಬಿ.ನಾಗರಾಜ್ ಮಾತನಾಡಿ, ಸಹಕಾರಿ ಸಂಘಗಳು ರೈತಾಪಿ ವರ್ಗದವರ ಆರ್ಥಿಕ ಏಳಿಗೆಗಾಗಿ ದುಡಿಯುತ್ತಿವೆ. ತೀವ್ರ ಬರಗಾಲ ಎದುರಿಸುತ್ತಿರುವ ಈ ಭಾಗದಲ್ಲಿ ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿದ್ದಾರೆ ಅವರ ಹಿತರಕ್ಷಣೆಗೆ ಶ್ರಮಿಸುವುದಾಗಿ ತಿಳಿಸಿದರು. ‌

ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುವುದರ ಮೂಲಕ ಸಂಘದ ಏಳಿಗೆಗೆ ಸಹಕಾರ ನೀಡಬೇಕು. ಸಂಘದಲ್ಲಿ ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ರೈತರ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದರು. ‌

ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೆ.ಮೋಹನ್, ನಿರ್ದೇಶಕರಾದ ಮಂಜುನಾಥ ಜಿ.ಪಿ, ವೆಂಕಟೇಶಪ್ಪ. ವಿ. ಗಣೇಶ್. ಜಿ.ಎಂ, ನಾಗರಾಜು.ಎ, ರಾಮಚಂದ್ರಪ್ಪ.ಎನ್, ಕೆಂಪಣ್ಣ.ಪಿ, ಮುನಿರಾಜು.ಆರ್, ವೆಂಕಟೇಶಪ್ಪ ಎಂ,ದಾಸಪ್ಪ, ಚನ್ನಮ್ಮ, ಮಾಜಿ ಕಾರ್ಯದರ್ಶಿ ಬಿ.ರಾಮಚಂದ್ರಪ್ಪ, ಮಂಡಿಬೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್‌.ಶಿವಕುಮಾರ್, ಸದಸ್ಯ ಧರ್ಮಪುರ ಕೃಷ್ಣಪ್ಪ ಅಧ್ಯಕ್ಷ – ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !