ವಿಜಯಪುರ: ಪಟ್ಟಣದ ಪುರಸಭಾ ಕಾರ್ಯಲಯದ ಮುಂಭಾಗದಲ್ಲಿರುವ ಹೈ ಮಾಸ್ಟ್ ಬೀದಿ ದೀಪಗಳು 15 ದಿನಗಳಿಂದ ಕಾರ್ಯನಿರ್ವಹಿಸದ ಕಾರಣ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರಾದ ಕುಮಾರ್, ವೆಂಕಟೇಶ್, ಬಸವರಾಜು, ಅಶೋಕ್ ಆರೋಪಿಸಿದ್ದಾರೆ.

ವಿಜಯಪುರದಿಂದ ಯಲಹಂಕ, ಬೆಂಗಳೂರು, ದೊಡ್ಡಬಳ್ಳಾಪುರದ ಮಾರ್ಗವಾಗಿ ಸಾಗಲು ಈ ರಸ್ತೆಯಲ್ಲಿ ತಿರುವು ಪಡೆದು ಮುಖ್ಯರಸ್ತೆಯಲ್ಲಿ ಸಾಗಬೇಕು ಎಂದು ತಿಳಿಸಿದರು. ಬೆಂಗಳೂರಿನಿಂದ ಬರುವ ಬಹುತೇಕ ಬಸ್‌ಗಳು ಈ ವೃತ್ತದಲ್ಲಿಯೇ ತಿರುವು ಪಡೆದು ಶಿಡ್ಲಘಟ ಮಾರ್ಗವಾಗಿ ಸಂಚಾರಿಸುತ್ತವೆ. ಹತ್ತಿರದ ಗಾರ್ಮೆಂಟ್ಸ್‌ಗಳಿಗೆ ಕೆಲಸಕ್ಕೆ ತೆರಳುವ ಮಹಿಳೆಯರು ರಾತ್ರಿಯ ವೇಳೆ ಇದೆ ರಸ್ತೆಯ ಮೂಲಕ ಮನೆಗೆ ತೆರಳುತ್ತಾರೆ ಎಂದರು.

ಹದಿನೈದು ದಿನಗಳಿಂದ ಇಲ್ಲಿನ ಸರ್ಕಲ್‌ನಲ್ಲಿರುವ ಹೈಮಾಸ್ಕ್ ದೀಪ ಕಾರ್ಯನಿರ್ವಹಿಸುತ್ತಿಲ್ಲ. ಈ ರಸ್ತೆ ಮೂಲಕ ಸಂಚಾರಿಸುವ ಮಹಿಳೆಯರ ಸರಗಳ್ಳತನಗಳು ನಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದರು. ಪುರಸಭೆಯ ಮುಂದೆಯೇ ಈ ರೀತಿಯ ಸಮಸ್ಯೆ ಇದ್ದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಕಚೇರಿಯ ಮುಂದೆಯೇ ಈ ಪರಿಸ್ಥಿತಿಯದರೆ ನಗರದ ವಾರ್ಡ್‌ಗಳ ಪರಿಸ್ಥಿತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಜನರಿಗೆ ಆಗುತ್ತಿರುವ ತೊಂದರೆಯಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದರು.

ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಮಾತನಾಡಿ, ಹೈ ಮಾಸ್ಟ್ ವಿದ್ಯುತ್ ದೀಪಗಳನ್ನು ನಿರ್ವಹಣೆ ಮಾಡುತ್ತಿದ್ದ ಗುತ್ತಿಗೆದಾರರ ಟೆಂಡರ್ ಮುಗಿದಿರುವ ಕಾರಣ ಈ ರೀತಿಯ ಸಮಸ್ಯೆ ಉದ್ಭವಿಸಿದೆ ಎಂದರು. ಪುರಸಭೆಯ ಕಚೇರಿಯ ಮುಂಭಾಗವೂ ಸೇರಿದಂತೆ 12 ನೇ ವಾರ್ಡ್, 18 ನೇ ವಾರ್ಡ್ ಬಳಿಯಿರುವ ದೀಪಗಳು ದುರಸ್ಥಿಗೆ ಬಂದಿವೆ. ಹೊಸದಾಗಿ ಟೆಂಡರ್ ಕರೆದು ಶೀಘ್ರವಾಗಿ ಸರಿಪಡಿಸಲು ಪ್ರಯತ್ನ ಮಾಡುತ್ತೇವೆ ಎಂದರು.

ಗಾಂಧಿಚೌಕ, ಶಿಡ್ಲಘಟ್ಟ ಕ್ರಾಸ್‌ನಲ್ಲೂ ಹೈ ಮಾಸ್ಟ್ ದೀಪಗಳನ್ನು ಅಳವಡಿಸಲು ಚಿಂತನೆ ಮಾಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.