ಈ ಊರು ಚಿಕ್ಕದು, ಇವರಿಗೆ ರಸ್ತೆ ಏನಕ್ಕೆ ಬೇಕು ಎಂದು ಸ್ಥಳೀಯ ಆಡಳಿತಗಳು 15 ವರ್ಷದಿಂದ ರಸ್ತೆ ಮಾಡಿಸಿಲ್ಲ. ವೋಟು ಕೇಳಲು ಮಾತ್ರ ನಮ್ಮೂರಿಗೆ ಬರುವ ರಾಜಕಾರಣಿಗಳು ಇನ್ನು ಮುಂದೆ ಒಂದು ಕೆಲಸವನ್ನು ಮಾಡಿ ಕೊಡಲ್ಲ, ವೋಟು ಕೇಳಲ್ಲ ಎಂದು ಬೋರ್ಡ್ ಹಾಕಿಸಿಬಿಡಿ, ನಾವು ನಮ್ಮ ದಾರಿ ನೋಡಿಕೊಳ್ಳುತ್ತೇವೆ.
ತಿರುಮಲಪ್ಪ, ನಿವಾಸಿ, ಹೊಸದಿಂಬಹಳ್ಳಿ
ನಮ್ಮೂರ ರಸ್ತೆಯೇ ಹಿಂಗೇ ಅಂದರೆ ನಮ್ಮಗಳ ಬದುಕು ಇನ್ನು ಹೇಗಿರಬೇಕು ಯೋಚಿಸಿ, ಇನ್ನಾದರೂ ನಮ್ಮೂರಿನ ರಸ್ತೆ ದುರಸ್ತಿ ಮಾಡಿಸಿ ಬಾವಪುರಕ್ಕೆ ಬರುವ ಬಸ್ ನಮ್ಮೂರಿಗೂ ಬರುವ ಹಾಗೆ ಮಾಡಿದರೆ ಸಾಕು ಇನ್ನೇನು ಕೇಳೋದಿಲ್ಲ. ನಮ್ಮ ಮಕ್ಕಳು ಬೇರೆ ಊರಿಗೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾರೆ