ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ | ಭಾರಿ ವಾಹನ ಸಂಚಾರ: ಹದಗೆಟ್ಟ ರಸ್ತೆ

Published 16 ಮೇ 2024, 6:31 IST
Last Updated 16 ಮೇ 2024, 6:31 IST
ಅಕ್ಷರ ಗಾತ್ರ

ಹೊಸಕೋಟೆ: ನಿರಂತರ ಭಾರಿ ವಾಹನಗಳ ಓಡಾಟದಿಂದ ದೇವನಗೊಂದಿ-ಐಒಸಿ ರಸ್ತೆಯ ರೈಲ್ವೇಗೇಟ್ ಸಮೀಪದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಇಲ್ಲಿ  ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ.

ರಸ್ತೆ ಮಾರ್ಗದಲ್ಲಿ ಹಲವು ಕಾರ್ಖಾನೆಗಳಿವೆ. ಇಲ್ಲಿಂದ ಬೇರೆಡೆಗೆ ಪೆಟ್ರೋಲ್, ಡೀಸೆಲ್‌ ಸಾಗಣೆಗೆ ನಿತ್ಯ ಸಾವಿರಾರು ಭಾರಿ ವಾಹನ ಸಂಚರಿಸುತ್ತವೆ. ಇದರಿಂದ ರಸ್ತೆಯ ಗುಂಡಿಮಯವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ.

ದೇವನಗೊಂದಿ ರೈಲ್ವೆ ನಿಲ್ದಾಣದ ದೇವಲಾಪುರದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಚರಂಡಿ ನೀರು ರಸ್ತೆಯಂಚಿನಲ್ಲಿ ಹರಿಯುತ್ತಿದ್ದು, ಗುಂಡಿಗಳಿಗೆ ನೀರು ತುಂಬಿಕೊಂಡು ಇನ್ನಷ್ಟು ಅಧ್ವಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT