ಆನೆ ಮರಿ ಅಂದಾಜು 120 -130 ಕೆ.ಜಿಗೂ ಹೆಚ್ಚು ತೂಕವಿದ್ದು, ಆರೋಗ್ಯವಾಗಿದೆ. ಉದ್ಯಾನದ ಇತರ ಸಿಬ್ಬಂದಿಯೂ ತಾಯಿ ಮತ್ತು ಮರಿಯಾನೆಯನ್ನು ಅತ್ಯಂತ ಜತನದಿಂದ ನೋಡಿಕೊಳ್ಳುತ್ತಿದ್ದಾರೆ. ವೇದಾಳ ಮಾವುತ ಮಣಿಕಂಠ ಮತ್ತು ದ್ಯಾವಪ್ಪ ಆನೆ ಮತ್ತು ಮರಿಯ ಆರೈಕೆಯಲ್ಲಿ ತೊಡಗಿದ್ದಾರೆ. ತಾಯಿಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ. ಉದ್ದು, ಅವಲಕ್ಕಿ, ಕಡಲೆಕಾಳು, ಹೆಸರಕಾಳು, ತೆಂಗಿನಕಾಯಿ ಸೇರಿದಂತೆ ವಿಶೇಷ ಆಹಾರವನ್ನು ನೀಡಲಾಗುತ್ತಿದೆ.