ಭಾನುವಾರ, ಜನವರಿ 24, 2021
28 °C

‘ಹಕ್ಕಿಜ್ವರದ ಲಕ್ಷಣ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಹಕ್ಕಿ ಜ್ವರದ ಯಾವುದೇ ಲಕ್ಷಣಗಳು ತಾಲ್ಲೂಕಿನಲ್ಲಿ ಪತ್ತೆಯಾಗಿಲ್ಲ. ಎಂಟು ಜನ ವೈದ್ಯರ ತಂಡವನ್ನು ರಚಿಸಿ ಈ ಬಗ್ಗೆ ನಿಗಾವಹಿಸಲಾಗಿದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಅಂಜಿನಪ್ಪ ತಿಳಿಸಿದ್ದಾರೆ.

ಹಕ್ಕಿ ಜ್ವರದ ಲಕ್ಷಗಳು ಸಾಮಾನ್ಯವಾಗಿ ಡಿಸೆಂಬರ್‌ ಹಾಗೂ ಜನವರಿ ತಿಂಗಳಲ್ಲಿ ಪ್ರತಿವರ್ಷ ಅರಣ್ಯದಲ್ಲಿನ ಪಕ್ಷಿಗಳಲ್ಲಿ ಕಾಣಿಸಿಕೋಳ್ಳುತ್ತದೆ. ಆದರೆ, ಸಂಘಟಿತ ರೂಪದಲ್ಲಿ ಕೋಳಿ ಸಾಕಾಣಿಕೆ ಮಾಡುವಲ್ಲಿ ಹಕ್ಕಿಜ್ವರ ಕಾಣಿಸಿಕೊಳ್ಳುವುದು ಅಪರೂಪ ಎನ್ನುತ್ತಾರೆ ಪ್ರಗತಿ ಹ್ಯಾಚರಿಸ್‌ನ ಮಾಲೀಕ ಡಾ.ಸಿ.ಎಸ್‌.ಶ್ರೀನಿವಾಸ್‌.

ಹಕ್ಕಿ ಜ್ವರಕ್ಕೂ ಕೋಳಿಗಳಿಗೂ ತಳುಕುಹಾಕುವುದು ತಪ್ಪು. ಕೋಳಿಗಳನ್ನು ಸಾಕಾಣಿಕೆ ಮಾಡುವ ರೈತರು ಪ್ರತಿ ಕೋಳಿ ಮರಿಗೂ ಹಂತ ಹಂತವಾಗಿ ಅಗತ್ಯ ಲಸಿಕೆ ಹಾಕಿಸುತ್ತಾರೆ. ಹೀಗಾಗಿ ಕೋಳಿಗಳಿಗೆ ಹಕ್ಕಿಜ್ವರ ವೈರಸ್‌ ತಗಲುವುದಿಲ್ಲ. ಹಕ್ಕಿಜ್ವರದ ವೈರಸ್‌ ಪತ್ತೆಹಚ್ಚಿ 23 ವರ್ಷಗಳು ಕಳೆದಿದೆ. ಹಕ್ಕಿಜ್ವರ ಅಪಾಯಕಾರಿಯೂ ಅಲ್ಲ. ಹಕ್ಕಿ ಜ್ವರದ ವೈರಸ್‌ಗೆ ಈಗಾಗಲೇ ಲಸಿಕೆಯೂ ಸಹ ಇದೆ ಎಂದರು.

ಹಕ್ಕಿ ಜ್ವರವನ್ನು ಕೋಳಿ ಜ್ವರ ಎಂದು ಅಪಪ್ರಚಾರ ಮಾಡುವುದು ತಪ್ಪು. ಕೋಳಿಗಳಿಗೆ ಬರುವ ರೋಗಗಳೆ ಬೇರೆ. ಮುಸುಕಿನಜೋಳ ಖರೀದಿ ಮೇಲೆ ಪರಿಣಾಮ ಬೀರಿದ್ದು ಜೋಳದ ಬೆಲೆ, ಕೋಳಿ ಬೆಲೆಯೂ ಕುಸಿತವಾಗಿದೆ. ಕೋಳಿ ಉದ್ಯಮಕ್ಕಷ್ಟೇ ನಷ್ಟವಾಗುತ್ತಿಲ್ಲ. ಕೃಷಿ ಉತ್ಪನಗಳ ಬೆಲೆಯೂ ಕುಸಿತವಾಗಲಿದ್ದು ರೈತರು ನಷ್ಟ ಅನುಭವಿಸುವಂತಾಗುತ್ತಿದೆ. ಹಕ್ಕಿ ಜ್ವರದ ವಿರುದ್ಧ ಎಚ್ಚರ ವಹಿಸಬೇಕೇ ವಿನಹ ಅಪಪ್ರಚಾರ ಮಾಡುವುದು ತಪ್ಪು ಎಂದಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು