ದೊಡ್ಡಬಳ್ಳಾಪುರ: ದೇಶಾಭಿಮಾನ, ಪ್ರಾಮಾಣಿಕತೆ, ಶೌರ್ಯ ಸಾಹಸಕ್ಕೆ ಮತ್ತೊಂದು ಹೆಸರೇ ಸಂಗೊಳ್ಳಿ ರಾಯಣ್ಣ. ಅದರಲ್ಲೂ ಸ್ವಾಭಿಮಾನ ಹಾಗೂ ಜನ್ಮಭೂಮಿಯ ಅಭಿಮಾನದ ವಿಚಾರದಲ್ಲಿ ರಾಯಣ್ಣ ಇತರರಿಗೆ ಮಾದರಿ ಎಂದು ಪ್ರಗತಿಪರ ಚಿಂತಕ ನಿಕೇತ್ ರಾಜ್ ಮೌರ್ಯ ಹೇಳಿದರು.

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಹಕಾರ ಸಂಘದಿಂದ ಕುರುಬ ಸಮಾಜದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.

ಸ್ವಾತಂತ್ರ್ಯ ಚಳುವಳಿ ಆರಂಭ ಆಗುವ ದಶಕಗಳ ಹಿಂದೆಯೇ ಬ್ರಿಟೀಷರ ವಿರುದ್ಧ ಸೆಟೆದು ನಿಂತಿದ್ದು ರಾಯಣ್ಣ. ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದೆ.

ನಂತರ ನಡೆದ ಚಳುವಳಿಯಲ್ಲಿ ಹುತಾತ್ಮರಾದ ಬೇರೆ ರಾಜ್ಯದ ಹೋರಾಟಗಾರರನ್ನು ಇತಿಹಾಸ ತಜ್ಞರು ಗುರುತಿಸಿದರು. ಆದರೆ ಸ್ವಾತಂತ್ರ್ಯ ಚಳುವಳಿಗೆ ಇಡೀ ದೇಶದಲ್ಲೇ ಪ್ರಥಮ ಬಾರಿಗೆ ಚಾಲನೆ ನೀಡಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ರಾಯಣ್ಣನನ್ನು ಇತಿಹಾಸಕಾರರು ಗುರುತಿಸಲಿಲ್ಲ ಎಂದರು.

ವಿಜಯಪುರ ಜಿಲ್ಲೆ ಶಿರೂರು ಸಂಸ್ಥಾನದ ಶರಬಯ್ಯ ಸ್ವಾಮೀಜಿಯವರಿಂದ ಆಶೀರ್ವಚನ ನಡೆಯಿತು.

ಇತಿಹಾಸ ಮತ್ತು ಪರಂಪರೆ ಸಂಶೋಧಕ ಗಿರಿಧರ್ ತಿಮ್ಮಪ್ಪ ನಾಯಕ, ಶಾಸಕ ಧೀರಜ್ಮುನಿರಾಜು, ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ, ಕರ್ನಾಟಕ ಪ್ರದೇಶ ಕುರುಬರ ಸಂಘದ ಖಜಾಂಚಿ ಕೆ.ಎಂ.ಕೃಷ್ಣಮೂರ್ತಿ, ನಗರಸಭೆ ಉಪಾಧ್ಯಕ್ಷ ಎಂ.ಮಲ್ಲೇಶ್, ತೂಬಗೆರೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ, ಮಲ್ಲೇಶ್, ಕೆಂಪಣ್ಣ, ಆಲಳ್ಳಿಚಂದ್ರು, ವಕೀಲರ ಸಂಘದ ಪ್ರದಾನ ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ಲಾವಣ್ಯ ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ನಗರಸಭೆ ಸದಸ್ಯ ಚಂದ್ರಮೋಹನ್, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ರವಿ, ಉಪಾಧ್ಯಕ್ಷ ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.