ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣದ ಚೌಡಪ್ಪನಹಳ್ಳಿ ಸಮೀಪವಿರುವ ಚೋಳರ ಕಾಲದ ತಬ್ಬು ಲಿಂಗೇಶ್ವರ ದೇಗುದಲ್ಲಿ ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ಭಕ್ತ ಸಾಗರವೇ ಹರಿದು ಬಂತು.

ಮಕ್ಕಳಾಗಲಿ, ಹಿರಿಯರಾಗಲಿ ಭಕ್ತಿಯಿಂದ ಲಿಂಗವನ್ನು ಅಪ್ಪಿದರೇ ಪೂರ್ಣವಾಗಿ ಕೈ ಅಳತೆಗೆ ದೊರೆಯುವ ಲಿಂಗ ಇದಾಗಿದ್ದು, ಇಷ್ಟಾರ್ಥ ಸಿದ್ಧಿ ಪುಣ್ಯ ಕ್ಷೇತ್ರವಾಗಿ, ದಕ್ಷಿಣ ಕಾಶಿಯೆಂದೇ ಜನಜನಿತವಾಗಿರುವ ಪೂಜ್ಯ ಸ್ಥಳವಾಗಿ ಬದಲಾಗಿದೆ. ಕಾರ್ತಿಕ ಸೋಮವಾರದ ಕಡೇಯ ದಿನದಂದು ದೇವಾಲಯ ಅಭಿವೃದ್ಧಿ ಸಮಿತಿಯೂ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದರು.

ಸೋಮವಾರ ಬೆಳಗ್ಗೆಯಿಂದಲೇ ದೇವರಿಗೆ ಬಿಲ್ವಾರ್ಜನೆ, ಹೋಮ ಹವನ ವಿಶೇಷ ಪೂಜೆ ನಡೆಯಿತು. ದೂರದ ಊರುಗಳಿಂದ ದೇವರ ದರ್ಶನ ಪಡೆಯಲು ಉಪವಾಸವಿದ್ದ ಭಕ್ತರು ಕಿ.ಮೀ ಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆದರು. ಸ್ವಾಮಿಯ ದರ್ಶನ ಪಡೆಯಲು ಆಗಮಿಸಿದ್ದ ಭಕ್ತರು ಶಿವ ನಾಮ ಸ್ಮರಣೆ ಮಾಡಿ, ದೇವರ ಗುಡಿಯಲ್ಲಿರುವ ಶಿವ ಸ್ವರೂಪ ದಶ ಲಿಂಗಳ ದರ್ಶನ ಪಡೆದು, ವಿಭೂತಿ, ಬಿಲ್ವ ಪತ್ರೆಗಳನ್ನು ಅರ್ಪಿಸಿದರು.

ಪಾರ್ವತಿ ಸಮೇತ ಶಿವ ಉತ್ಸವ ಮೂರ್ತಿಯನ್ನು ತುಗುಯ್ಯಾಲೆ ಸೇವೆ ಮಾಡುತ್ತಾ, ದೇವರ ಆಶೀರ್ವಾದ ಪಡೆದರು. ತಿಲಕವನ್ನು ಧರಿಸಿ, ಅನ್ನದಾನಕ್ಕೆ ಧನ ಸಹಾಯ ಮಾಡುತ್ತಾ ಭಕ್ತಿ ಲೀಲೆಯಲ್ಲಿ ತಲ್ಲಿನರಾಗಿದ್ದ ದೃಶ್ಯಗಳು ಕಂಡು ಬಂದವು.

ಆಗಮಿಸಿದ್ದ ಭಕ್ತರಿಗೆ ಪಾಲವ್, ಸಿಹಿ ಪೊಂಗಲ್, ರಸಾಯನ ಪ್ರಸಾದವನ್ನು ವಿತರಣೆ ಮಾಡಲಾಯಿತು. ಮಹಾ ಪ್ರಸಾದವನ್ನು ಸವಿದ ಭಕ್ತರು ಇಷ್ಟಾರ್ಥಕ್ಕೆ ಪ್ರಾರ್ಥಿಸಿಕೊಂಡರು. ವಿವಿಧ ಗಣ್ಯರು, ರಾಜಕೀಯ ಮುಖಂಡರು ಆಗಮಿಸಿ ದರ್ಶನ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.