ಅರಣ್ಯ ಇಲಾಖೆಯು ಕಾಡು ಹಂದಿಗಳ ಹಾವಳಿಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳವ ಮೂಲಕ ನಿಯಂತ್ರಿಸಬೇಕು ಹಾಗೂ ಬೆಳೆ ನಾಶಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು
ಆನಂದ್ ರಾವ್ ಚತ್ತಗುಟ್ಲಹಳ್ಳಿ
ಕಾಡು ಹಂದಿಗಳ ಹಿಂಡುಗಳು ರಾತ್ರಿ ಹೊತ್ತು ಜಮೀನುಗಳಿಗೆ ನುಗ್ಗಿ, ಭತ್ತದ ತೆನೆಗಳನ್ನು ತಿಂದು ಮತ್ತು ತುಳಿದು ನಾಶಪಡಿಸುತ್ತವೆ,ರೈತರು ಕಷ್ಟಪಟ್ಟು ಬೆಳೆದ ಬೆಳೆ ನಾಶವಾಗುವುದರಿಂದ ದೊಡ್ಡ ಆರ್ಥಿಕ ನಷ್ಟ ಅನುಭವಿಸುವಂತಾಗಿದ್ದು, ಲಭಿಸಬೇಕಿದ್ದ ಲಾಭ ಕೈ ತಪ್ಪಿ ಹೋಗುತ್ತದೆ.
ಸಂತೋಜಿ ರಾವ್ ಕನಮನಹಳ್ಳಿ ಗ್ರಾಮದ ಭತ್ತ ಬೆಳೆಗಾರ
ಕಾಡು ಹಂದಿಗಳ ಹಾವಳಿಯಿಂದಾಗಿ ಭತ್ತದ ಬೆಳೆ ನಾಶವಾಗುತ್ತಿದ್ದು, ರೈತರು ದೊಡ್ಡ ನಷ್ಟವನ್ನು ಅನುಭವಿಸುತ್ತಿದ್ದಾರೆ,ಬೆಳೆ ನಷ್ಟವನ್ನು ತಡೆಗಟ್ಟುವಲ್ಲಿ ಮತ್ತು ಸೂಕ್ತ ಪರಿಹಾರ ಒದಗಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ
ಕೆ ಎಂ ಮಂಜುನಾಥ ಮಾಜಿ ಗ್ರಾ ಪಂ ಅಧ್ಯಕ್ಷರು
ಹಂದಿಗಳ ದಾಳಿಯಿಂದ ಆಗಿರುವ ಬೆಳೆ ನಾಶವನ್ನು ಪರೀಶೀಲನೆ ಮಾಡಿ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ನೀಡಲು ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ
ಸರೀನಾ ಸಿಕ್ಕಲಿಗರ್, ಅರಣ್ಯ ಸಂರಕ್ಷಣಾಧಿಕಾರಿ ಕೋಲಾರ
ಬಂಗಾರಪೇಟೆ ತಾಲ್ಲೂಕಿನ ಸಂತೋಜಿ ರಾವ್ ರವರ ಭತ್ತವನ್ನು ಹಂದಿಗಳು ನಾಶ ಮಾಡಿರುವುದು
ಬಂಗಾರಪೇಟೆ ತಾಲ್ಲೂಕಿನ ಸಂತೋಜಿ ರಾವ್ ರವರ ಭತ್ತವನ್ನು ಹಂದಿಗಳು ನಾಶ ಮಾಡಿರುವುದು