ಬೆಳಗಾವಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಧರ್ಮವೀರ ಸಂಭಾಜಿ ವೃತ್ತದವರೆಗೆ ಧನ್ವಂತರಿ ಜಯಂತಿ ಪ್ರಯುಕ್ತ ಶನಿವಾರ ನಡೆದ ಆಯುರ್ವೇದ ನಡಿಗೆ ಗಮನಸೆಳೆಯಿತು.

ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ, ಎಸ್ಬಿಜಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ಡಾ.ರವಿ ಪಾಟೀಲ ಆಯುರ್ವೇದ ಮಹಾವಿದ್ಯಾಲಯವು ಆಯುಷ್ ಇಲಾಖೆ ಸಹಯೋಗದೊಂದಿಗೆ ನಡಿಗೆ ಆಯೋಜಿಸಿತ್ತು.

ವಿವಿಧ ಕಾಲೇಜುಗಳ ನೂರಾರು ಆಯುರ್ವೇದ ವಿದ್ಯಾರ್ಥಿಗಳು ಉತ್ಸಾಹದಿಂದ ಹೆಜ್ಜೆಹಾಕಿ, ಭಿತ್ತಿಚಿತ್ರಗಳ ಪ್ರದರ್ಶನದ ಮೂಲಕ ಆಯುರ್ವೇದದ ಮಹತ್ವ ಸಾರಿದರು.

ಕಂಕಣವಾಡಿ ಕಾಲೇಜಿನ ಪ್ರಾಚಾರ್ಯ ಡಾ.ಸುಹಾಸಕುಮಾರ ಶೆಟ್ಟಿ, ಎಸ್ಬಿಜಿ ಕಾಲೇಜಿನ ಪ್ರಾಚಾರ್ಯ ಡಾ.ಅಡಿವೇಶ ಅರಿಕೇರಿ, ಪಾಟೀಲ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಕಿರಣ ಖೋತ, ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ.ಶ್ರೀಕಾಂತ ಸುಣಧೋಳಿ, ಡಾ. ಪಿ.ಜಿ.ಜಾಡರ, ಡಾ.ಅರುಣ ಚೌಗುಲೆ, ಡಾ.ವಿನೋದ ಗುರವ, ಡಾ.ಲಕ್ಷ್ಮೀಕಾಂತ, ಡಾ. ಮಂಜುಳಾ, ಡಾ.ಪ್ರಶಾಂತ ತೋರಣಗಟ್ಟಿ, ಡಾ.ಸಂದೀಪ ಕುರಾಡೆ, ಐ.ಎಸ್.ಪಂಡಿತ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.