ಹುಕ್ಕೇರಿ: ತಾಲ್ಲೂಕಿನ ಗುಟಗುದ್ದಿ ಗ್ರಾಮದಲ್ಲಿ ನಡೆದ ಬಸವರಾಜ ಹುಂದ್ರಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಹೊಸ ವಂಟಮೂರಿ ತಂಡವು, ಗುಟಗುದ್ದಿ ತಂಡವನ್ನು ಮಣಿಸಿ, ಜಯ ಗಳಿಸಿತು.

ಹೊಸ ವಂಟಮೂರಿ ತಂಡಕ್ಕೆ ಪ್ರಥಮ ಬಹುಮಾನವಾಗಿ ₹10 ಸಾವಿರ ಮತ್ತು ಟ್ರೋಫಿ, ಗುಟಗುದ್ದಿ ತಂಡಕ್ಕೆ ದ್ವಿತೀಯ ಬಹುಮಾನ ₹7 ಸಾವಿರ ಮತ್ತು ಟ್ರೋಫಿ ಹಾಗೂ ಸೋನಟ್ಟಿ ತಂಡಕ್ಕೆ ತೃತೀಯ ಬಹುಮಾನ ₹5 ಸಾವಿರ ಮತ್ತು ಟ್ರೋಫಿ ವಿತರಿಸಲಾಯಿತು. ಒಟ್ಟು 28 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.

ಬಹುಮಾನ ವಿತರಿಸಿ ಮಾತನಾಡಿದ ರಾಜ್ಯ ಬಿಜೆಪಿ ಎಸ್.ಟಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ, ‘ಕ್ರೀಡೆಯಲ್ಲಿ ಸೋಲು–ಗೆಲುವು ಸಹಜ. ಸ್ಪರ್ಧಾಳುಗಳು ಕ್ರೀಡಾಸ್ಫೂರ್ತಿ ಬೆಳೆಸಿಕೊಳ್ಳಬೇಕು. ಸೋಲನ್ನು ಗೆಲುವಾಗಿಸುವತ್ತ ಚಿಂತಿಸಬೇಕೆ ವಿನಃ ವೈರತ್ವ ಸಾಧಿಸುವುದರಲ್ಲಿ ಅರ್ಥವಿಲ್ಲ’ ಎಂದರು.

ಗಂಗಾರಾಮ್ ಪಾಟೀಲ, ಬಸವರಾಜ ಲಂಕೆಪ್ಪಗೋಳ, ಬಸವರಾಜ ಪೂಜೇರಿ, ರಾಮಚಂದ್ರ ನಾಯಿಕ, ಯಲ್ಲಪ್ಪ ಗಡಕರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.