ನಿಪ್ಪಾಣಿ: ತಾಲ್ಲೂಕಿನ ಶೇಂಡೂರು ಗ್ರಾಮದಲ್ಲಿ ಮೇ 14ರಿಂದ 18ರವರೆಗೆ ಆದಿಪರಾಶಕ್ತಿ ಚಾಮುಂಡೇಶ್ವರಿ ಮಹಾಕಾಳಿ ಅಮ್ಮನವರ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಓಂ ಶಕ್ತಿ ದೇವಸ್ಥಾನ ಪೀಠದ ಅರುಣಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಾಗೂ ಕಂಕನಾಡಿಯ ಗಂಗಾಧರ ಭಟ್ ಅವರ ಪೌರೋಹಿತ್ಯದಲ್ಲಿ ಈ ಮಹೋತ್ಸವ ಜರುಗಲಿದೆ.

ಮೇ 14ರಂದು ಬೆಳಿಗ್ಗೆ 4ಕ್ಕೆ ಪುಣ್ಯಾಹವಾಚನ, ತೋರಣ ಮುಹೂರ್ತ ಮಹಾಗಣಪತಿ ಹೋಮ, ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ 7ಕ್ಕೆ ದೇವಿ ಮಹಾಪೂಜೆ ಜರುಗಲಿದೆ.

15 ರಂದು ಬೆಳಿಗ್ಗೆ 7ಕ್ಕೆ ಶಿವಪಂಚಾಕ್ಷರಿ ಹೋಮ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ 7ಕ್ಕೆ ದೇವಿ ಮಹಾಪೂಜೆ, 16ರಂದು ಬೆಳಿಗ್ಗೆ 7ಕ್ಕೆ ಭಗವತಿ ದೇವಿಪೂಜೆ, ಅಲಂಕಾರ ಪೂಜೆ, ಮದ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ 7ಕ್ಕೆ ದೇವಿ ಮಹಾಪೂಜೆ ನಡೆಯುವುದು.

17ರಂದು ಬೆಳಿಗ್ಗೆ 7ಕ್ಕೆ ನಾಗದೇವರ ಪಂಚಾಮೃತ ಅಭಿಷೇಕ ಕಲಶಾಭಿಷೇಕ, ತನು ತಂಬಿಲ, ಅಲಂಕಾರ ಪೂಜೆ, ನಾಗದರ್ಶನ ಸೇವೆ, ಚಂಡಿಕಾ ಹೋಮ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಮ.2ಕ್ಕೆ ಭಜನೆ ಕಾರ್ಯಕ್ರಮ, ಸಂಜೆ 4ಕ್ಕೆ ಕಾಲಭೈರವ ಬಲಿ ಉತ್ಸವ, ಹೂವಿನ ಪೂಜೆ ಆಯೋಜಿಸಲಾಗಿದೆ.

18ರಂದು ಬೆಳಿಗ್ಗೆ 4ಕ್ಕೆ ಆದಿಪರಾಶಕ್ತಿ, ಚಾಮುಂಡೇಶ್ವರಿ ಮಹಾಕಾಳಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ನವಕ ಪ್ರಧಾನ, ಅಲಂಕಾರ ಪೂಜೆ, 7ಕ್ಕೆ ಮಹಾಕಾಳಿ ದೇವಿ ದರ್ಶನ ಸೇವೆ, ಮಹಾಕಾಳಿ ಬಲಿ ಉತ್ಸವ, ಶ್ರೀಗಳಿಂದ ಮದುಕರ, ಮಹಾಪೂಜೆ, 10ಕ್ಕೆ ಕೃಷಿ ಜಾನುವಾರು ಪ್ರದರ್ಶನ, ಮಧ್ಯಾಹ್ನ 12ಕ್ಕೆ ಮಹಾ ಅನ್ನಸಂತರ್ಪಣೆ, 2ಕ್ಕೆ ಅತಿಥಿಗಳ ಸತ್ಕಾರ, ಕುಸ್ತಿ ಪಂದ್ಯಾವಳಿ, ಸಂಜೆ 7ಕ್ಕೆ ರಂಗಪೂಜೆ, ಮಹಾಕಾಳಿ ಅಮ್ಮನವರ ಬಲಿ ಉತ್ಸವ ಮತ್ತು ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ, ಕಟ್ಟೆಪೂಜೆ, ಉಯ್ಯಾಲೆ ಸೇವೆ, ಮಹಾಮಂಗಳಾರತಿ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.