ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಗ್ರಂಥಾಲಯವಾದ ತಂಗುದಾಣ

Last Updated 22 ಸೆಪ್ಟೆಂಬರ್ 2021, 14:25 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ರಾಮತೀರ್ಥ ನಗರ ಬಡಾವಣೆಯ ಮೊದಲ ಕ್ರಾಸ್‌ನಲ್ಲಿ ಬಹುದಿನಗಳಿಂದ ಉಪಯೋಗಕ್ಕೆ ಬಾರದಂತಾಗಿದ್ದ ತಂಗುದಾಣವನ್ನು, ಸ್ಥಳೀಯರ ಆಶಯದಂತೆ ಗ್ರಂಥಾಲಯ ಕಟ್ಟಡವನ್ನಾಗಿ ರೂಪಿಸಲಾಗಿದೆ.

ತಂಗುದಾಣ ಬಳಕೆಯಾಗದ ಕುರಿತು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಸ್ಥಳೀಯರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿಯನ್ನೂ ಸಲ್ಲಿಸಿದ್ದರು.

ನಿವಾಸಿಗಳು ಸ್ನೇಹ ಸಮಾಜ ಸೇವಾ ಸಂಘಟನೆಯ ಮೂಲಕ ಮಾಜಿ ಮೇಯರ್‌ ಎನ್.ಬಿ. ನಿರ್ವಾಣಿ, ಸಂಘಟನೆಯ ಅಧ್ಯಕ್ಷ ಸುರೇಶ ಉರಬಿನಹಟ್ಟಿ ನೇತೃತ್ವದಲ್ಲಿ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿ, ಶಾಸಕ ಅನಿಲ ಬೆನಕೆ ಮತ್ತು ಬೂಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಅವರನ್ನು ಒತ್ತಾಯಿಸಿದ್ದರು. ‘ರಸ್ತೆಯಿಂದ ದೂರದಲ್ಲಿರುವ ತಂಗುದಾಣ ಬಳಕೆ ಆಗುತ್ತಿಲ್ಲ. ಅದನ್ನು ಗ್ರಂಥಾಲಯವಾಗಿ ನಿರ್ಮಿಸಿಕೊಟ್ಟರೆ ಅನುಕೂಲ ಆಗುತ್ತದೆ’ ಎಂಬ ಸಲಹೆಯನ್ನೂ ನೀಡಿದ್ದರು. ಅದರಂತೆ ಬುಡಾದಿಂದ ಕ್ರಮ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT