ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ: ಲೋಕ ಅದಾಲತ್‌ನಲ್ಲಿ ಒಂದಾದ ಪತಿ-ಸತಿ

Published 13 ಸೆಪ್ಟೆಂಬರ್ 2023, 15:40 IST
Last Updated 13 ಸೆಪ್ಟೆಂಬರ್ 2023, 15:40 IST
ಅಕ್ಷರ ಗಾತ್ರ

ಬೈಲಹೊಂಗಲ: ಪಟ್ಟಣದ ನ್ಯಾಯಾಲಯ ಆವರಣದಲ್ಲಿ ನಡೆದ ಬೃಹತ್ ಲೋಕ ಅದಾಲತ್‌ನಲ್ಲಿ ಹಲವು ಪ್ರಕರಣಗಳು ರಾಜಿಯಾದವು. ಅದರಲ್ಲಿ ವೈವಾಹಿಕ ಹಕ್ಕುಗಳ ಪುನರ್ ಸ್ವಾಧಿನತೆ (ತನ್ನೊಂದಿಗೆ ಬಾಳ್ವೆ ನಡೆಸುವಂತೆ ಪತ್ನಿಗೆ ಆದೇಶಿಸುವಂತೆ ಅರ್ಜಿ)ಗಾಗಿ ಸಲ್ಲಿಸಿದ ಪ್ರಕರಣವೊಂದು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿತು.

ಹಿರಿಯ ದಿವಾಣಿ ನ್ಯಾಯಧೀಶೆ ಉಷಾರಾಣಿ ಆರ್. ನೇತೃತ್ವದಲ್ಲಿ ಈಚೆಗೆ ನಡೆದ ಲೋಕ ಆದಾಲತ್‌ನಲ್ಲಿ ಪತಿ–ಪತ್ನಿ ಕೂಡಿ ಬಾಳುವ ಇಚ್ಛೆ ವ್ಯಕ್ತಪಡಿಸಿದ್ದರಿಂದ ನ್ಯಾಯಾಧೀಶರು ಹರ್ಷ ವ್ಯಕ್ತಪಡಿಸಿ ಪರಸ್ಪರ ಅವರಿಗೆ ಹೂ ಮಾಲೆ ಹಾಕಿಸಿ, ಸಿಹಿ ತಿನ್ನಿಸಿದರು.

ಅರ್ಜಿದಾರರ ಪರವಾಗಿ ವಕೀಲ ಆನಂದ ತುರಮರಿ, ಎದುರುಗಾರ ಪರ ಶ್ರೀಧರ ಪಾಟೀಲ ವಕಾಲತ್ತು ವಹಿಸಿದ್ದರು. ವಕೀಲರು, ಕಕ್ಷಿದಾರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT